ಬಿಎಸ್‌ಎನ್‌ಎಲ್ ಎಸ್‌ಟಿಡಿ/ಐಎಸ್‌ಡಿ ಕರೆಶುಲ್ಕದಲ್ಲಿ ಶೇ.25ಕಡಿತ
ಬಿಎಸ್‌ಎನ್‌ಎಲ್ ಎಸ್‌ಟಿಡಿ/ಐಎಸ್‌ಡಿ ಕರೆಶುಲ್ಕದಲ್ಲಿ ಶೇ.25ಕಡಿತ
ಏಪ್ರಿಲ್ 10ರಿಂದ ಹೊಸ ಶುಲ್ಕ ಜಾರಿ
ಭಾರತದಿಂದ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಗ್ನೇಯ ಏಷ್ಯಾ ರಾಷ್ಟ್ರಗು, ಗಲ್ಫ್, ಆಫ್ರಿಕಾ ಹಾಗೂ ಸಾರ್ಕ್ ದೇಶಗಳಿಗೆ ಹೋಗುವ ಬಿಎಸ್‌ಎನ್‌ಎಲ್ ಕರೆಗಳಿಗೆ ಶೇ.25ರ ಕಡಿತ ಅನ್ವಯಿಸಲಿದೆ. ಇದೇರೀತಿ, 200 ಕಿಮೀ ವ್ಯಾಪ್ತಿ ಮೀರಿದ ಎಸ್‌ಟಿಡಿ ಕರೆಗಳಿಗೂ ಶೇ.25ರ ಕಡಿತವನ್ನು ಬಿಎಸ್‌ಎನ್‌ಎಲ್ ಪ್ರಕಟಿಸಿದೆ. ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ವಿ.ಪಿ.ಸಿನ್ಹ ಈ ದರ ಕಡಿತದ ವಿಷಯವನ್ನು ಗುರುವಾರ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಎಸ್‌ಎನ್‌ಎಲ್ ದರ ಕಡಿತದಿಂದಾಗಿ, 200 ಕಿಮೀ ವ್ಯಾಪ್ತಿ ಮೀರಿದ ಎಸ್‌ಟಿಡಿ ದರಗಳು 4.80 ರು.ಗಳಿಂದ 3.60 ರು.ಗೆ (ಪ್ರತಿ ನಿಮಿಷಕ್ಕೆ) ಇಳಿಯಲಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications