ವಿಶ್ವದ 2000 ಅಗ್ರಮಾನ್ಯ ಸಂಸ್ಥೆಗಳಲ್ಲಿ 27ಭಾರತೀಯ ಕಂಪೆನಿಗಳು
ವಿಶ್ವದ 2000 ಅಗ್ರಮಾನ್ಯ ಸಂಸ್ಥೆಗಳಲ್ಲಿ 27ಭಾರತೀಯ ಕಂಪೆನಿಗಳು
ಅತ್ಯುನ್ನತ ಕಂಪೆನಿಗಳ ಹೆಸರು ಪ್ರಕಟಿಸಿದ ಫೋರ್ಬ್ಸ್
ಭಾರತೀಯ ಕಂಪೆನಿಗಳಲ್ಲಿ ಅಗ್ರಸ್ಥಾನವನ್ನು ‘ಇಂಡಿಯನ್ ಆಯಿಲ್’ ಪಡೆದಿದೆ. ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ನಂತರದ ಸ್ಥಾನದಲ್ಲಿದೆ. ತೈಲ, ಅನಿಲ ಮತ್ತು ಬ್ಯಾಂಕಿಂಗ್ ಉದ್ಯಮಗಳು ಈಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿವೆ.
ಭಾರತದ ಹತ್ತು ಬ್ಯಾಂಕಿಂಗ್ ಉದ್ಯಮಗಳು, ಐದು ಅನಿಲ ಮತ್ತು ತೈಲ ಕಂಪೆನಿಗಳು, ಎರಡು ದೂರಸಂಪರ್ಕ ಕಂಪೆನಿಗಳು ಮತ್ತು ಎರಡು ಸಾಫ್ಟ್‌ವೇರ್ ಕಂಪೆನಿಗಳು ಪಟ್ಟಿಯಲ್ಲಿ ದಾಖಲಾಗಿವೆ. ಕಳೆದ ವರ್ಷ ಪ್ರಕಟಗೊಂಡ ಪಟ್ಟಿಯಲ್ಲಿ 20 ಭಾರತೀಯ ಕಂಪೆನಿಗಳಿದ್ದವು.
ವಿಶ್ವದಲ್ಲೇ ‘ಇಂಡಿಯನ್ ಆಯಿಲ್’ 243ನೇ ಕಂಪೆನಿಯಾದರೆ ‘ಓರಿಯಂಟಲ್ ಬ್ಯಾಂಕ್’ 2000ನೇ ಸ್ಥಾನ ಗಳಿಸುವ ಮೂಲಕ ಪಟ್ಟಿಯಲ್ಲಿ ಹೆಸರು ನಮೂದಿಸಿಕೊಂಡಿದೆ.
‘ಸಿಟಿ ಗ್ರೂಪ್ಸ್’ ಪ್ರಪಂಚದ ಕಂಪೆನಿಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ವಿಶ್ವದ 10 ಅತ್ಯುನ್ನತ ಕಂಪೆನಿಗಳ ಪೈಕಿ 7 ಅಮೇರಿಕಾದ ಕಂಪೆನಿಗಳಿದ್ದರೆ, 2 ಇಂಗ್ಲೆಂಡ್ ಹಾಗೂ 1 ಜಪಾನ್ ಮೂಲದ ಕಂಪೆನಿಯಿದೆ.
ಈ 2000 ಕಂಪೆನಿಗಳ ಒಟ್ಟಾರೆ ವ್ಯವಹಾರ 19 ಟ್ರಿಲಿಯನ್ ಡಾಲರ್‌ಗಳಿವೆ. ಇವುಗಳ ಆದಾಯ 760 ಬಿಲಿಯನ್ ಡಾಲರ್‌ಗಳು. ಅಲ್ಲದೆ 68 ಟ್ರಿಲಿಯನ್ ಡಾಲರ್ ಆಸ್ತಿಯಿದೆ, ಮತ್ತು 24 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ. ಇಷ್ಟಿದ್ದರೂ ಈ ಕಂಪೆನಿಗಳು ಒಟ್ಟು ಕೇವಲ 64ಮಿಲಿಯನ್ ಉದ್ಯೋಗಿಗಳನ್ನು ಮಾತ್ರ ಹೊಂದಿವೆ.
ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬ್ಯಾಂಕ್‌ಗಳು
| ಸ್ಥಾನ | ಬ್ಯಾಂಕ್‌ಗಳ ಹೆಸರು |
| 251 | ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ |
| 820 | ಐಸಿಐಸಿಐ |
| 1271 | ಕೆನರಾ ಬ್ಯಾಂಕ್ |
| 1286 | ಪಂಜಾಬ್ ನ್ಯಾಶನಲ್ ಬ್ಯಾಂಕ್ |
| 1344 | ಬ್ಯಾಂಕ್ ಆಫ್ ಇಂಡಿಯಾ |
| 1358 | ಬ್ಯಾಂಕ್ ಆಪ್ ಬರೋಡ |
| 1555 | ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಪ್ ಇಂಡಿಯಾ |
| 1642 | ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ |
| 1984 | CÍwá®… KÊÜ…ÔÀÓ… ÝÍP… |
| 2000 | ಓರಿಯೆಂಟಲ್ ಬ್ಯಾಂಕ್ ಆಪ್ ಕಾಮರ್ಸ್ |
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications