ಮುಲ್ತಾನ್‌ನಲ್ಲಿ ಮುನ್ನೂರರ ‘ಎವರೆಸ್ಟ್‌ ’ಏರಿದ ವೀರೇಂದ್ರಶೆಹ್ವಾಗ್‌

ಮುಲ್ತಾನ್‌ನಲ್ಲಿ ಮುನ್ನೂರರ ‘ಎವರೆಸ್ಟ್‌ ’ಏರಿದ ವೀರೇಂದ್ರಶೆಹ್ವಾಗ್‌
ಶೆಹ್ವಾಗ್‌ 309, ಸಚಿನ್‌ 33ನೇ ಟೆಸ್ಟ್‌ ಶತಕ

ಮುಲ್ತಾನ್‌: ಭಾರತದ ಪ್ರಚಂಡ ಆರಂಭಿಕ ಆಟಗಾರ ವೀರೇಂದ್ರ ಶೆಹ್ವಾಗ್‌ ಪಾಕ್‌ ವಿರುದ್ಧದ ಸ್ನೇಹ ಸರಣಿಯ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ 309 ರನ್‌ಗೆ ಔಟಾಗುವ ಮುನ್ನ , ತಮ್ಮ ಹೆಸರಿನಲ್ಲಿ ಎರಡು ದಾಖಲೆ ಬರೆದುಕೊಂಡರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ದಾಂಡಿಗನೊಬ್ಬನ ಅತಿಹೆಚ್ಚಿನ ವೈಯುಕ್ತಿಕ ಗಳಿಕೆ ಎನ್ನುವ ದಾಖಲೆ ಒಂದೆಡೆ, ತ್ರಿಶತಕ ಬಾರಿಸಿದ ಪ್ರಥಮ ಭಾರತೀಯ ಎಂಬ ಗೌರವ ಇನ್ನೊಂದೆಡೆ. ಮುಲ್ತಾನ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಶೆಹ್ವಾಗ್‌ಗೆ ಇನ್ನೊಂದಿಷ್ಟು ಅದೃಷ್ಟ ಕೂಡಿಬಂದಿದ್ದಲ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆಯುವ ಎಲ್ಲ ಸಾಧ್ಯತೆಯೂ ಇತ್ತು . ಶೆಹ್ವಾಗ್‌ ತಮ್ಮ ಅಕೌಂಟಿನಲ್ಲಿ 309 ರನ್‌ ಜಮೆಯಾಗಿದ್ದಾಗ, ಸಮಿ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ತೌಫಿಕ್‌ ಉಮ್ಮರ್‌ ಕೈಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಇದರೊಂದಿಗೆ ವರ್ಣರಂಜಿತ ಇನಿಂಗ್ಸ್‌ ಒಂದಕ್ಕೆ ತೆರೆ ಬಿದ್ದಂತಾಯಿತು.

ಸೆಹವಾಗ್‌ ಮುನ್ನೂರು ರನ್‌ ಗಳಿಸುವ ಮುನ್ನ ಲಕ್ಷ್ಮಣ್‌ ಹೆಸರಿನಲ್ಲಿದ್ದ ಭಾರತೀಯನೊಬ್ಬನ ಅತಿ ಹೆಚ್ಚಿನ ರನ್‌ ಗಳಿಕೆಯಾಗಿದ್ದ 281ರನ್‌ಗಳ ದಾಖಲೆಯನ್ನು ಮುರಿದರು. ಅದು ಕೊಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾಗಿತ್ತು. ಶೆಹವಾಗ್‌ ಔಟಾದ ಬಳಿಕ ಅವರನ್ನು ಅಭಿನಂದಿಸುತ್ತಾ ಲಕ್ಷ್ಮಣ್‌ ಕ್ರೀಸಿಗಾಗಮಿಸಿದರು.

ಸಕ್ಲೇನ್‌ ಮುಶ್ತಾಕ್‌ ಬಾಲಿಂಗ್‌ನಲ್ಲಿ ಸಿಕ್ಸರ್‌ ಚಚ್ಚುವ ಮೂಲಕ ತ್ರಿಶತಕದ ಸಂಭ್ರಮ ದಾಖಲಿಸಿದ ಶೆಹ್ವಾಗ್‌, ಈ ಸಾಧನೆ ಮಾಡಿದ ವಿಶ್ವದ 17ನೇ ಆಟಗಾರರಾಗಿದ್ದಾರೆ. ವಿಶ್ವದ ಸರ್ವಕಾಲಿಕ ವೈಯುಕ್ತಿಕ ಅತಿಹೆಚ್ಚಿನ ಮೊತ್ತವನ್ನು ಆಸ್ಟ್ರೇಲಿಯಾದ ಹೇಡನ್‌(380) ಜಿಂಬಾಬ್ವೆ ವಿರುದ್ಧ ಸಾಧಿಸಿದ್ದರು.

ಸಚಿನ್‌ ಶತಕ : ಶೆಹ್ವಾಗ್‌ಗೆ ಉತ್ತಮ ಜೊತೆಯಾಟ ನೀಡಿದ ಸಚಿನ್‌ ತಮ್ಮ 33ನೇ ಟೆಸ್ಟ್‌ ಶತಕ ದಾಖಲಿಸಿದ್ದಾರೆ. ಪಂದ್ಯದ ಹೆಚ್ಚಿನ ವಿವರಗಳಿಗೆ ಹಾಗೂ ಕ್ಷಣಕ್ಷಣ ಸ್ಕೋರ್‌ಗಾಗಿ http://www.thatscricket.com ಭೇಟಿಕೊಡಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+