Get Updates
Get notified of breaking news, exclusive insights, and must-see stories!

ದಾನಿಗಳು ಹಾಗೂ ಸಂಸ್ಥೆಗಳ ಸಂಪರ್ಕ ಸೇತು ‘ಬೆಂಗಳೂರು ಹುಂಡಿ’

ದಾನಿಗಳು ಹಾಗೂ ಸಂಸ್ಥೆಗಳ ಸಂಪರ್ಕ ಸೇತು ‘ಬೆಂಗಳೂರು ಹುಂಡಿ’
ಸಾಂಗ್ಲಿಯಾನ ಅವರಿಂದ ಬೆಂಗಳೂರು ಹುಂಡಿಗೆ ಚಾಲನೆ

ಬೆಂಗಳೂರು : ನಿಮಗೆ ದಾನ ಮಾಡಬೇಕೆನ್ನುವ ಮನಸ್ಸಿದೆಯಾ? ಯಾವ ಸಂಸ್ಥೆಗೆ ದಾನ ಮಾಡಬೇಕೆನ್ನುವ ಗೊಂದಲದಲ್ಲಿದ್ದೀರಾ ? ಇನ್ನು ಗೊಂದಲಕ್ಕೆ ಅವಕಾಶವಿಲ್ಲ , ಇದೋ ಇಲ್ಲಿದೆ ಬೆಂಗಳೂರು ಹುಂಡಿ!

ಪ್ರಮುಖ ದಾನಿಗಳಿಗೆ ಸಹಕಾರಿಯಾಗುವಂತೆ, ಎಲ್ಲಾ ಸರ್ಕಾರೇತರ ಸಂಸ್ಥೆಗಳನ್ನು (NGO)ಒಳಗೊಂಡ ‘ಬೆಂಗಳೂರು ಹುಂಡಿ’ಯನ್ನು ಬೆಂಗಳೂರು ನಗರದ ಮಾಜಿ ಪೊಲೀಸ್‌ ಆಯುಕ್ತ ಎಚ್‌.ಟಿ.ಸಾಂಗ್ಲಿಯಾನ ಇತ್ತೀಚೆಗೆ ಉದ್ಘಾಟಿಸಿದರು. ಈ ಹುಂಡಿಯ ಮೂಲಕ ನಿಜವಾದ ಸಮಾಜ ಸೇವೆಯಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆಗಳಿಗೆ ದಾನಿಗಳು ನೆರವು ನೀಡಬಹುದು.

ಬೆಂಗಳೂರು ‘ಹುಂಡಿ’ಯಿಂದ ದಾನಿಗಳು ನೈಜ ಕಾಳಜಿ ಹೊಂದಿದ ಸರ್ಕಾರೇತರ ಸಂಸ್ಥೆಗಳನ್ನು ಸುಲಭದಲ್ಲಿ ಗುರುತಿಸ ಬಹುದಾಗಿದೆ. ದಾನಿಗಳಿಗಷ್ಟೇ ಅಲ್ಲ , ಸರ್ಕಾರೇತರ ಸಂಸ್ಥೆಗಳಿಗೂ ಈ ಹುಂಡಿ ಅನುತಕೂಲಕರವಾಗಲಿದೆ. ದಾನಿಗಳನ್ನು ಪಡೆಯಲು ಕಷ್ಟವಾಗುತ್ತಿದ್ದ ಸಾಚಾ ಉದ್ದೇಶ ಹೊಂದಿದ ಸರ್ಕಾರೇತರ ಸಂಸ್ಥೆಗಳಿಗೆ, ಮತ್ತು ಮನಪೂರ್ವಕ ದಾನ ಮಾಡಲಿಚ್ಚಿಸುವ ದಾನಿಗಳಿಗೆ ಹುಂಡಿಯು ಸಂಪರ್ಕಸೇತುವಾಗಿ ಕೆಲಸ ಮಾಡಲಿದೆ ಎನ್ನುತ್ತಾರೆ, ಹುಂಡಿಯ ಹಿಂದಿನ ಮೆದುಳು ಐಡಿಎಲ್‌ ಫೌಂಡೇಶನ್‌ನ ವ್ಯವಸ್ಥಾಪಕ ಧರ್ಮದರ್ಶಿ ಪಿಕೆ ಪೌಲ್‌.

ಬೆಂಗಳೂರು ಹುಂಡಿಯ ಚಟುವಟಿಕೆಗಳು- ಮ್ಯೂಜಿಯಂ ರಸ್ತೆಯ ಸೇಂಟ್‌ ಪ್ಯಾಟ್ರಿಕ್ಸ್‌ ಕಮ್ಯೂನಿಟಿ ಹಾಲ್‌ನಲ್ಲಿ ಮಾ.28ರಿಂದ ಮಾ.30ರವರೆಗೂ ನಡೆಯಲಿವೆ. ಸಮಯ ಬೆಳಗ್ಗೆ 11ರಿಂದ ರಾತ್ರಿ 8.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+