ಚುನಾವಣೆ ಹತ್ತಿರಾಗುತ್ತಿವೆ, ಬಳ್ಳಾರಿಯಲ್ಲಿ ರಸ್ತೆಗಳು ಪ್ರಕಾಶಿಸುತ್ತಿವೆ !
ಚುನಾವಣೆ ಹತ್ತಿರಾಗುತ್ತಿವೆ, ಬಳ್ಳಾರಿಯಲ್ಲಿ ರಸ್ತೆಗಳು ಪ್ರಕಾಶಿಸುತ್ತಿವೆ !
ಚುನಾವಣೆ ಸಮಯದಲ್ಲಿ ಕಾಮಗಾರಿಗಳಿಗೆ ಜೀವ, ಬಿಜೆಪಿ ಆಕ್ಷೇಪ
ಈವರೆಗೂ ಕೇಳುವವರಿಲ್ಲದ, ಶತಮಾನಗಳಿಂದ ಡಾಂಬರು ಲೇಪವನ್ನೇ ಕಾಣದ ಬಳ್ಳಾರಿ ರಸ್ತೆಗಳೀಗ ಮಿಂಚಿಂಗು. ನಗರದ ಮುಖ್ಯರಸ್ತೆಗಳಷ್ಟೇ ಅಲ್ಲ , ಕೊಳಗೇರಿಯ ಮಣ್ಣುರಸ್ತೆಗಳ ಗುಂಡಿಗಳಿಗೂ ಈಗ ಮೋಕ್ಷ ದೊರೆಯುತ್ತಿದೆ. ಗಾಂಧಿನಗರ-ಕಪ್ಪಗಲ್ ರಸ್ತೆ ಹಾಗೂ ಮೋಕಾ ರಸ್ತೆಗಳು ಈಗ ಹೊಸತಾಗಿ ಡಾಂಬರೀಕರಣಗೊಂಡು ಹೊಳೆಯುತ್ತಿವೆ.
ಹೊಸಪೇಟೆ ರಸ್ತೆ ಮತ್ತು ಅನಂತಪುರ ರಸ್ತೆಯ ಸುಣ್ಣಬಣ್ಣ ಕಾಮಗಾರಿಯೂ ಈಗ ಮುಕ್ತಾಯವಾಗಿದೆ. ಸಂಗಕಲ್ ರಸ್ತೆ , ಸತ್ಯನಾರಾಯಣಪೇಟೆ ಮುಖ್ಯರಸ್ತೆಯ ಕಾಮಗಾರಿಗಳು ಪ್ರಗತಿಯಲ್ಲಿದ್ದು , ಸಣ್ಣಸಣ್ಣ ತಿರುವು ರಸ್ತೆಗಳ ಅರೆಕೊರೆಗಳನ್ನೂ ಸರಿಪಡಿಸಲಾಗುತ್ತಿದೆ.
ಅನೇಕ ರಸ್ತೆ ಕಾಮಗಾರಿಗಳನ್ನು ಕೂಲಿಗಾಗಿ ಕಾಳು ಯೋಜನೆಯಲ್ಲಿ ನಡೆಸಲಾಗುತ್ತಿದೆ. ಕೆಲವು ಕಾಮಗಾರಿಗಳನ್ನು ಶಾಸಕರ ಕೋಟಾದಲ್ಲಿಯೂ, ಮತ್ತಷ್ಟು ಕಾಮಗಾರಿಗಳನ್ನು ಹುಡ್ಕೋದ ನೆರವಿನಲ್ಲಿಯೂ ನಡೆಸಲಾಗುತ್ತಿದೆ. ನೆರವಿನ ಮೂಲ ಯಾವುದೇ ಇರಲಿ- ಕಾಮಗಾರಿಗಳಿಗೆ ಮುಹೂರ್ತ ಕೂಡಿಬಂದಿರುವುದು ಮಾತ್ರ ಚುನಾವಣೆ ಕಾರಣದಿಂದಲೇ!
ಚುನಾವಣೆಗೆ ಜೈ ಎನ್ನುತ್ತಿದೆ ಬಳ್ಳಾರಿ ಜನತೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications