ಮಣಿಪಾಲ : ಅಂತರರಾಷ್ಟ್ರೀಯ ಮುದ್ರಣ-ಮಾಧ್ಯಮ ಸಮಾವೇಶ
ಮಣಿಪಾಲ : ಅಂತರರಾಷ್ಟ್ರೀಯ ಮುದ್ರಣ-ಮಾಧ್ಯಮ ಸಮಾವೇಶ
ಮೂರು ದಿನಗಳ ಸಮಾವೇಶಕ್ಕೆ ದೇಶ ವಿದೇಶಗಳ ಪ್ರತಿನಿಧಿಗಳು
ಮಣಿಪಾಲ ತಾಂತ್ರಿಕ ಸಂಸ್ಥೆ (MIT) ಯ ಮುದ್ರಣ ಮತ್ತು ಮಾಧ್ಯಮ ವಿಭಾಗವು ಆಯೋಜಿಸಿರುವ ಈ ಸಮಾವೇಶದಲ್ಲಿ 200ಕ್ಕೂ ಹೆಚ್ಚು ಮುದ್ರಣ ಮಾಧ್ಯಮ ತಜ್ಞರಲ್ಲದೆ ದೇಶ-ವಿದೇಶದಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಅಂತರರಾಷ್ಟ್ರಿಯ ಸ್ಪರ್ಧೆ ಇರುವುದರಿಂದ ಮುದ್ರಣ ವೆಚ್ಚ ಮತ್ತು ಪ್ರತಿಯ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮುದ್ರಣ ವೆಚ್ಚವು ನೇರವಾಗಿ ಲಾಭದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಾವೇಶ ಉದ್ಘಾಟಿಸಿ ಮಾತನಾಡಿದ ಹೈಡಲ್‌ಬರ್ಗ್ ವ್ಯವಸ್ಥಾಪಕ ನಿರ್ದೇಶಕ ಒಲೆ ಎಸ್. ರಸ್‌ಮ್ಯೂಸೆನ್ ಹೇಳಿದರು.
ಮುದ್ರಣ ಮಾಧ್ಯಮವು ಜಗತ್ತಿನ ಮೂರನೆ ಅತಿ ದೊಡ್ಡ ಕೈಗಾರಿಕೆ. ಈ ಕ್ಷೇತ್ರದಲ್ಲಿ ಅವಕಾಶ ಮತ್ತು ಸಾಧ್ಯತೆ ಹೆಚ್ಚಾಗಿದೆ. ಈ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಪ್ರಯೋಗಶೀಲರಾಗಿರ ಬೇಕು ಎಂದು ಮಾಹೆ ಡೀಮ್‌ಡ್ ವಿಶ್ವವಿದ್ಯಾಲಯದ ಉಪ-ಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.
ಯಾವಾಗಲೂ ಪ್ರಮುಖ ಕಂಪೆನಿಗಳು ಮಾರುಕಟ್ಟೆಯಲ್ಲಿ ಸ್ಪರ್ಧೆ ಇರುವಂತೆ ವ್ಯವಹರಿಸಬೇಕು. ಗ್ರಾಹಕರಿಗೆ ಮತ್ತು ಅವಿಷ್ಕಾರಗಳಿಗೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು. ಸ್ಪರ್ಧೆ ಇಲ್ಲದಿದ್ದಲ್ಲಿ ಹೊಸತನ ಇರುವುದಿಲ್ಲ. ಇದು ಕ್ರಮೇಣ ಗುಣಮಟ್ಟದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications