ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರ
ಬೆಂಗಳೂರು ನಗರದಲ್ಲಿ ಕೆನರಾಬ್ಯಾಂಕ್‌ನ 56ನೇ ಎಟಿಎಂ ಕೇಂದ್ರಗಳು
ಬೆಂಗಳೂರು ವಲಯದಲ್ಲಿ ಇದು ಕೆನರಾ ಬ್ಯಾಂಕ್‌ನ 67ನೇ ಎಟಿಎಂ ಕೇಂದ್ರವಾಗಿದ್ದು , ಬೆಂಗಳೂರು ನಗರದ 56ನೇ ಎಟಿಎಂ ಕೇಂದ್ರ ಇದಾಗಿದೆ ಎಂದು ಕೆನರಾಬ್ಯಾಂಕ್‌ನ ಸುದ್ದಿ ಪ್ರಕಟಣೆ ತಿಳಿಸಿದೆ.
ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೆನರಾಬ್ಯಾಂಕ್ ಈಗಾಗಲೇ ಎರಡು ಎಟಿಎಂಗಳನ್ನು ಪ್ರಾರಂಭಿಸಿದೆ. ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕೆನರಾಬ್ಯಾಂಕ್‌ನ ಎಂಟಿಎಂ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.
ಮಾರ್ಚ್ ತಿಂಗಳ ಅಂತ್ಯದೊಳಗೆ 100 ಕೇಂದ್ರಗಳ ವ್ಯಾಪ್ತಿಯಲ್ಲಿ ಕೆನರಾಬ್ಯಾಂಕ್ 500 ಎಟಿಎಂ ಕೇಂದ್ರಗಳನ್ನು ಆರಂಭಿಸಲಿದೆ ಎಂದು ಬ್ಯಾಂಕ್‌ನ ಸಿಎಂಡಿ ಆರ್.ವಿ.ಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications