ಬಿಜೆಪಿ ವಿಮುಖ : ರಾಜ್ಯದಿ ಏಕಾಂಗಿ ಸ್ಪರ್ಧೆಗೆ ಜೆಡಿಯು ನಿರ್ಧಾರ
ಬಿಜೆಪಿ ವಿಮುಖ : ರಾಜ್ಯದಿ ಏಕಾಂಗಿ ಸ್ಪರ್ಧೆಗೆ ಜೆಡಿಯು ನಿರ್ಧಾರ
ರಾಜ್ಯದ 10 ಲೋಕಸಭೆ ಹಾಗೂ 95 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧೆ
ಪಕ್ಷವು ಮಣಿಪುರದಲ್ಲಿ ಸಹ ಸ್ವತಂತ್ರವಾಗಿ ಸ್ಪರ್ಧಿಸಿಲಿದೆ. ಜಾರ್ಖಂಡದಲ್ಲಿ ನಾವು 3 ಲೋಕಸಭಾ ಸೀಟು ನೀಡುವಂತೆ ಕೇಳಿದ್ದೆವು. ಕೇಸರಿಕರಣಗೊಂಡ ಬಿಜೆಪಿ ಅದನ್ನು ನಿರಾಕರಿಸಿದಾಗ ನಾವು ಸ್ವತಂತ್ರವಾಗಿ ಹೋರಾಡಲು ನಿರ್ಧರಿಸಿದೆವು. ಈಗ ದೇಶದಲ್ಲಿ ಒಟ್ಟು 40 ಲೋಕಸಭಾ ಸೀಟುಗಳಿಗೆ ಸ್ಪರ್ಧಿಸಲಿದ್ದೇವೆ. ಕರ್ನಾಟಕ, ಮಣಿಪುರ, ಉತ್ತರ ಪ್ರದೇಶ, ಲಕ್ಷದ್ವೀಪ, ಅಸ್ಸಾಂ, ರಾಜಸ್ಥಾನ , ಬಿಹಾರ ರಾಜ್ಯಗಳಲ್ಲಿ ಆಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಜೆಡಿ-ಯು ವಕ್ತಾರ ಶಿವಕುಮಾರ್ ತಿಳಿಸಿದ್ದಾರೆ.
ಬಿಹಾರದಲ್ಲಿ ಜೆಡಿ-ಯು 21 ಕ್ಷೇತ್ರ ಮತ್ತು ಬಿಜೆಪಿ 17 ಕ್ಷೇತ್ರದಲ್ಲಿ ಜೊತೆಯಾಗಿ ಸ್ಪರ್ಧಿಸಿಲಿವೆ. ಮುಜಾಫರ್‌ಪುರ್ ಕ್ಷೇತ್ರವನ್ನು ಆಗಾಗ್ಗೆ ಕ್ಷೇತ್ರ ಬದಲಾಯಿಸುವ ಪಕ್ಷಾಧ್ಯಕ್ಷ , ಪ್ರಸ್ತುತ ನಲಂದಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಜಾರ್ಜ್ ಫರ್ನಾಂಡೀಸ್ ಅವರಿಗೆೇಸ್ಕರ ನಿರ್ಧರಿಸದೆ ಬಿಡಲಾಗಿದೆ. ಜಾರ್ಜ್, ಕುರ್ಮಿಗಳು ಹೆಚ್ಚಾಗಿರುವ ನಲಂದಾ ಕ್ಷೇತ್ರವನ್ನು ಪಕ್ಷದ ಮುಖಂಡ ನಿತೀಶ್‌ಕುಮರ್‌ಗೆ ಬಿಟ್ಟುಕೊಡಲಿದ್ದಾರೆ ಎಂಬ ವದಂತಿಗಳ ಕುರಿತು ಕೇಳಲಾಗಿ ಅದನ್ನು ಪಕ್ಷದ ಸಂಸದೀಯ ಸಮಿತಿ ನಿರ್ಧರಿಸಲಿದೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications