ಶತಮಾನದ ದಾಳಿಗಾರ ಮೂತ್ತೆರಡರ ಮುರಳಿಗೆ 500ರ ಸಂಭ್ರಮ
ಶತಮಾನದ ದಾಳಿಗಾರ ಮೂತ್ತೆರಡರ ಮುರಳಿಗೆ 500ರ ಸಂಭ್ರಮ
ಪಂದ್ಯ ಸೋತರೂ-ಗೆದ್ದರೂ ಹಸನ್ಮುಖಿಯಾಗಿರುವ ಮುರಳೀಧರನ್‌ಗೀಗ 500ರ ಮುಗುಳ್ನಗೆ
ಕಳೆದ ಟೆಸ್ಟಿನಲ್ಲಷ್ಟೇ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್‌ವಾರ್ನೆ 500 ವಿಕೆಟ್ ಪೂರೈಸಿದ್ದರು. ಆಫ್ ಸ್ಪಿನ್ನರ್ ಮುರಳಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ.
ಈ ತನಕ ಮೂವರು ಬೌಲರ್ 500ರ ಸಾಧನೆ ಮಾಡಿದಂತಾಗಿದೆ. ವಿಶ್ವದಲ್ಲೇ ಅತಿ ಹೆಚ್ಚಿನ ವಿಕೆಟ್ (519) ಪಡೆದಿರುವ ವೆಸ್ಟ್‌ಇಂಡೀಸ್‌ನ ಕೋರ್ಟ್ನಿ ವಾಲ್ಷ್, ವಾರ್ನ್ ಹಾಗೂ ಮುರಳಿ ಈವರೆಗೆ 500ರ ಮ್ಯಾಜಿಕ್ ಫಿಗರ್ ಮುಟ್ಟಿದ್ದಾರೆ. ಸದ್ಯ ವಾರ್ನ್ ಮತ್ತು ಮುರಳಿ ಕಣದಲ್ಲಿರುವ ಆಟಗಾರರು.
ಈ ಟೆಸ್ಟ್ ಆರಂಭವಾಗುವ ಮುನ್ನ ಮುರಳಿ 496 ವಿಕೆಟ್‌ಪಡೆದಿದ್ದರು. ಇದು ಶ್ರಿಲಂಕಾ ತಂಡದ ತಮಿಳು ಮೂಲದ ಆಟಗಾರನ 87ನೇ ಟೆಸ್ಟ್. ಅವರು ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ 48 ರನ್ನಿಗೆ 4 ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾ 120 ರನ್ನಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications