ಬೇಸಿಗೆ ದಟ್ಟಣೆ ! ರೈಲ್ವೆ ಇಲಾಖೆಯಿಂದ ಹೆಚ್ಚುವರಿ ಸಾವಿರ ರೈಲು
ಬೇಸಿಗೆ ದಟ್ಟಣೆ ! ರೈಲ್ವೆ ಇಲಾಖೆಯಿಂದ ಹೆಚ್ಚುವರಿ ಸಾವಿರ ರೈಲು
ಹವಾ-ನಿಯಂತ್ರಿತ ರೈಲು ನಿರ್ವಹಣೆಯಲ್ಲಿ ಸುಧಾರಣೆ
ನಾವು ಬೇಸಿಗೆ ರಜಾದ ಅವಶ್ಯಕತೆಗಳನ್ನು ಅವಲೋಕಿಸಿದ್ದೇವೆ. ಸುಮಾರು ಒಂದು ಸಾವಿರ ರೈಲುಗಳನ್ನು ವಾರಕ್ಕೊಮ್ಮೆ, ವಾರಕ್ಕೆರಡು ಸಲ, ಹಾಗೂ ಪ್ರತಿನಿತ್ಯ, ದೇಶದ ವಿವಿಧ ಮಾರ್ಗದಲ್ಲಿ ಜನ ದಟ್ಟಣೆಗೆ ಅನುಗುಣವಾಗಿ ಬಿಡಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಆರ್.ಕೆ ಸಿಂಗ್ ಹೇಳಿದರು. ಅವರು ಬೇಸಿಗೆಯ ಜನದಟ್ಟಣೆ ನಿಯಂತ್ರಿಸಲು ರೈಲ್ವೆಯ ಯೋಜನೆಗಳ ಕುರಿತು ಮಾತನಾಡುತಿದ್ದರು.
ಈ ವರ್ಷ ಸಾಧಾರಣ, ಸುವಿಹಾರ, ಸುಖಕರ ಪ್ರಯಾಣಕ್ಕಾಗಿ ಇಲಾಖೆ ಕೆಲವು ವ್ಯವಸ್ಥೆಗಳನ್ನು ಸುಧಾರಿಸಿದೆ. ಕಳೆದ ಡಿಸೆಂಬರ್‌ನಿಂದಲೇ ನಾವು ಇದಕ್ಕಾಗಿ ತಯಾರಾಗುತಿದ್ದೇವೆ. ಹವಾ-ನಿಯಂತ್ರಿತ ರೈಲು ನಿರ್ವಹಣೆಯಲ್ಲಿ ಸುಧಾರಣೆ ಮಾಡುತ್ತಿದ್ದೇವೆ. ಟಿಕೇಟ್ ಕಾಯ್ದಿರಿಸುವಿಕೆ ವ್ಯವಸ್ಥೆಯು ಮತ್ತಷ್ಟು ಸುಲಭವಾಗಲಿದೆ. ಪ್ರಯಾಣಿಕರಿಗೆ ಶೀಘ್ರವಾಗಿ ಟಿಕೇಟ್ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಹೇಳಿದರು.
ರೈಲಿನಲ್ಲಿ ಪ್ರಯಾಣಿಸುವ ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು. ಈಗಿರುವ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ನೀರು ಪೂರೈಕೆ ಮತ್ತು ಶುಚಿತ್ವದ ಕಡೆ ಗಮನ ಹರಿಸಲಾಗುವುದು ಎಂದು ಆರ್.ಕೆ.ಸಿಂಗ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications