ಛಾಪಾ ಪಾಪದ ಎಲ್ಲ 48 ಪ್ರಕರಣ ಸಿಬಿಐಗೆ -ಸುಪ್ರಿಂ ಕೋರ್ಟ್‌

ಛಾಪಾ ಪಾಪದ ಎಲ್ಲ 48 ಪ್ರಕರಣ ಸಿಬಿಐಗೆ -ಸುಪ್ರಿಂ ಕೋರ್ಟ್‌
ಈ ಪ್ರಕರಣಗಳ ಕುರಿತು ಯಾವುದೇ ಅರ್ಜಿ ಸ್ವೀಕರಿಸದಿರಲು ಇತರ ನ್ಯಾಯಾಲಯಗಳಿಗೆ ಸೂಚನೆ

ನವದೆಹಲಿ : ಛಾಪಾ ಪಾಪ ಹಗರಣಕ್ಕೆ ಸಂಬಂಧಿಸಿದ ಎಲ್ಲಾ 48 ಪ್ರಕರಣಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಕ್ಕೆ ವಹಿಸಬೇಕೆಂದು ಮಾ.15ರ ಸೋಮವಾರ ಸುಪ್ರೀಮ್‌ ಕೋರ್ಟ್‌ ಸಂಬಂಧಪಟ್ಟ ರಾಜ್ಯಗಳಿಗೆ ಆದೇಶ ನೀಡಿದೆ.

ಛಾಪ ಪಾಪ ಹಗರಣಕ್ಕೆ ಸಂಬಂಧಪಟ್ಟ ಎಲ್ಲಾ 48 ಕಡತಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು. ಹಾಗೂ ಮುಂದಿನ ತನಿಖೆಗೆ ಎಲ್ಲ ರಾಜ್ಯಗಳು ಸಹಕಾರ ನೀಡಬೇಕು ಎಂದು ಸುಪ್ರೀಮ್‌ ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ. ಛಾಪಾಪಾಪದ ಪ್ರಮುಖ ಆರೋಪಿ ಅಬ್ದುಲ್‌ ಕರೀಮ್‌ ತೆಲಗಿಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಲು ಸುಪ್ರಿಂಕೋರ್ಟ್‌ ತನಿಖಾ ತಂಡಕ್ಕೆ ಅವಕಾಶ ಕಲ್ಪಿಸಿದೆ.

ಮುಂದಿನ ನಾಲ್ಕು ತಿಂಗಳೊಳಗಾಗಿ ತನಿಖೆಯ ವಸ್ತುಸ್ಥಿತಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸಿಬಿಐಗೆ ನಿರ್ದೇಶಿಸಿದೆ. ದೇಶದ ಯಾವುದೇ ನ್ಯಾಯಾಲಯಗಳು ಈ 48 ಪ್ರಕರಣಗಳಲ್ಲಿನ ದೂರಿನ ವಿರುದ್ಧ ಯಾವುದೇ ಅರ್ಜಿ ಸ್ವೀಕರಿಸಬಾರದು ಎಂದೂ ಸುಪ್ರಿಂಕೋರ್ಟ್‌ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+