ನಂ.2 ಆಗಿರುವುದು ಸಣ್ಣ ವಿಷಯವೇನೂ ಅಲ್ಲ ಎಂದರು ಅಡ್ವಾಣಿ

ನಂ.2 ಆಗಿರುವುದು ಸಣ್ಣ ವಿಷಯವೇನೂ ಅಲ್ಲ ಎಂದರು ಅಡ್ವಾಣಿ
ಬಾಲ್ಯದ ದಿನಗಳಿಂದಲೂ ವಾಜಪೇಯಿ ನನ್ನ ನಾಯಕ -ಹುಬ್ಬಳ್ಳಿಯಲ್ಲಿ ಉಪ ಪ್ರಧಾನಿ

ಹುಬ್ಬಳ್ಳಿ : ಕೇಂದ್ರ ಸರಕಾರದಲ್ಲಿ ಎರಡನೇ ಸ್ಥಾನದಲ್ಲಿ ಇರುವುದು ಸಣ್ಣ ವಿಷಯವೇನಲ್ಲ ಎಂದು ಹೇಳಿರುವ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ತಮ್ಮ ನಂ.2 ಸ್ಥನದ ಬಗ್ಗೆ ಹೆಮ್ಮೆ ಹಾಗೂ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಬಾಲ್ಯದಿಂದಲೂ ನನ್ನ ನಾಯಕ. ನಾವು ಜೊತೆಯಾದ ದಿನದಿಂದಲೂ ಅವರು ನಮ್ಮಿಬ್ಬರಲ್ಲಿ ಹಿರಿಯ ನಾಯಕ. ನಾವು ಇಷ್ಟು ದಶಕಗಳ ಕಾಲ ಜೊತೆಯಾಗಿಯೇ ಕಾರ್ಯನಿರ್ವಹಿಸಿದ್ದೇವೆ ಎಂದು ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಸೋಮವಾರ ಹೇಳಿದರು. ವಾಜಪೇಯಿ ಅವರ ಜನಪ್ರಿಯತೆಯಿಂದ ಭ್ರಮ ನಿರಸನ ಹೊಂದಿರುವ ಅಡ್ವಾಣಿ, ವಾಜಪೇಯಿ ಅವರನ್ನು ಹಿಂದೂಡುವ ಉದ್ದೇಶದಿಂದ ‘ಭಾರತ ಉದಯ ಯಾತ್ರೆ’ ನಡೆಸುತ್ತಿದ್ದಾರೆ ಎನ್ನುವ ಟೀಕೆಗಳಿಗೆ ಅಡ್ವಾಣಿ ಪ್ರತಿಕ್ರಿಯಿಸುತ್ತಿದ್ದರು.

ಕಳೆದ ಕೆಲವು ವರ್ಷಗಳಿಂದ ಮುಖ್ಯವಾಹಿನಿಯ ಪ್ರಚಾರದಲ್ಲಿ ಇಲ್ಲ ಎಂದು ಯಾರು ಹೇಳುತ್ತಾರೆ. ನನಗೆ ಸಿಕ್ಕಿದ ಮುಖ್ಯವಾಹಿನಿಯ ಖ್ಯಾತಿ ಹೆಚ್ಚಾಗಿದೆ ಎಂದು ್ಫಅನೇಕ ಸಲ ನನಗೆ ಅನ್ನಿಸುತ್ತಿದೆ. ಖ್ಯಾತಿ ಇಷ್ಟು ಸಾಕು, ಹೆಚ್ಚು ಬೇಕಾಗಿಲ್ಲ ಎಂದು ಅಡ್ವಾಣಿ ಹೇಳಿದರು.

ನೀವು ನಾಯಕರಾಗುವುದು ಯಾವಾಗ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು- ‘ನಾನು ನನ್ನ ವಲಯದಲ್ಲಿ ನಾಯಕನೆ’ ಎಂದರು. ನೀವು ಎರಡನೇ ಸ್ಥಾನದಲ್ಲೇ ಮುಂದುವರಿಯುವಿರಾ ಎಂಬ ಪ್ರಶ್ನೆಗೆ, ‘ ಹೌದು, ಇದರಲ್ಲೇನು ತಪ್ಪಿದೆ. ಎರಡನೇ ಸ್ಥಾನಕ್ಕೇರುವುದು ಸಣ್ಣ ವಿಷಯವೇ? ಎಂದು ಮರುಪ್ರಶ್ನಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+