ಶೇನ್‌ವಾರ್ನ್-500: ನಿಷೇಧದ ಬಳಿಕ ವಿಶ್ವದಾಖಲೆ ಮರುಹುಟ್ಟು
ಶೇನ್‌ವಾರ್ನ್-500: ನಿಷೇಧದ ಬಳಿಕ ವಿಶ್ವದಾಖಲೆ ಮರುಹುಟ್ಟು
ಐನೂರು ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಅಗ್ಗಳಿಕೆ, ವಾಲ್ಷ್ ದಾಖಲೆಗೆ 19 ವಿಕೆಟ್ ಬಾಕಿ
ಶ್ರೀಲಂಕಾದ ಹಷನ್ ತಿಲಕರತ್ನೆ ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎನ್ನುವ ಅಗ್ಗಳಿಕೆ ವಾರ್ನ್ ಅವರದಾಯಿತು. ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ನ ಅಂತಿಮ ದಿನ ವಾರ್ನೆ ಅವರು ಈ ದಾಖಲೆ ಸೃಷ್ಟಿಸಿದ್ದಾರೆ. ವಾರ್ನ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ 197 ರನ್‌ಗಳ ಅಂತರದಿಂದ ಶ್ರೀಲಂಕಾವನ್ನು ಮಣಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ವಾರ್ನ್, ಎರಡನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್ ಪಡೆದರು. ವಾರ್ನ್ ಅವರ ಸಮೀಪದ ಎದುರಾಳಿ ಶ್ರೀಲಂಕಾದ ಮುತ್ತಯ್ಯ ಮುರಳೀಧನ್ 496 ವಿಕೆಟ್ ಪಡೆದಿದ್ದಾರೆ. ಅತ್ಯಂತ ಹೆಚ್ಚು ವಿಕೆಟ್‌ಗಳ ದಾಖಲೆ ವೆಸ್ಟ್‌ಇಂಡೀಸ್‌ನ ವಾಲ್ಷ್ (519) ಹೆಸರಿನಲ್ಲಿದೆ.
ಸ್ಕೋರ್ ಬೋರ್ಡ್ :
ಆಸ್ಟ್ರೇಲಿಯಾ : ಮೊದಲ ಇನಿಂಗ್ಸ್ - 220 (ಲೆಹ್ಮನ್ 63, ಮುರಳೀಧರನ್ 59ಕ್ಕೆ 6)
ಶ್ರೀಲಂಕಾ : ಮೊದಲ ಇನಿಂಗ್ಸ್ - 381 (ದಿಲ್ಷನ್ 104, ಜಯವರ್ಧನೆ 68, ವಾರ್ನ್ 116ಕ್ಕೆ 5)
ಆಸ್ಟ್ರೇಲಿಯಾ : 2ನೇ ಇನಿಂಗ್ಸ್ - 512 ಕ್ಕೆ 8. (ಹೇಡನ್ 130, ಲೆಹ್ಮನ್ 129, ಮಾರ್ಟಿನ್ 110)
ಶ್ರೀಲಂಕಾ : 2 ನೇ ಇನಿಂಗ್ಸ್ - 154 (ಚಂದನ 43, ವಾರ್ನ್ 43ಕ್ಕೆ5)
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications