‘ಆಟದ ಜೊತೆ ಪಾಕಿಗಳ ಪ್ರೀತಿ ಗೆದ್ದು ಬನ್ನಿ’ ವಾಜಪೇಯಿ ಹಾರೈಕೆ
‘ಆಟದ ಜೊತೆ ಪಾಕಿಗಳ ಪ್ರೀತಿ ಗೆದ್ದು ಬನ್ನಿ’ ವಾಜಪೇಯಿ ಹಾರೈಕೆ
ಪಾಕ್ ಪ್ರವಾಸ ಹೊರಟ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಶುಭಾಶಯ
ಪಾಕ್ ಪ್ರವಾಸ ಹೊರಟ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನಿ ತಮ್ಮ ನಿವಾಸದಲ್ಲಿ ಬುಧವಾರ ಚಹಾಕೂಟ ಏರ್ಪಡಿಸಿದ್ದರು. ‘ಖೇಲ್ ಹೀ ನಹೀ ದಿಲ್ ಭೀ ಜೀತಿಯೇ. ಶುಭಾಕಾಮ್ನಾಯೇ’ ಎಂದು ಬ್ಯಾಟ್ ಮೇಲೆ ಬರೆದು ತಂಡದ ಕಪ್ತಾನ ಗಂಗೂಲಿಗೆ ನೀಡಿದರು. ಈ ಸಂದರ್ಭದಲ್ಲಿ ತಂಡದ ಎಲ್ಲಾ ಸದಸ್ಯರ ಸಹಿಯನ್ನೊಳಗೊಂಡ ಬ್ಯಾಟನ್ನು ತಂಡದ ಪರವಾಗಿ ಗಂಗೂಲಿ ಪ್ರಧಾನಿಗೆ ಹಸ್ತಾಂತರಿಸಿದರು.
ಪ್ರಧಾನಿ ನಿವಾಸದ ಮುಂದೆ ಶಾಲಾ ಮಕ್ಕಳು ತಂಡಕ್ಕೆ ಶುಭಕಾಮನೆಗಳು ಬರೆದ ಪ್ಲೇಕಾರ್ಡ್ ಹಿಡಿದು ಸಾಲುಗಟ್ಟಿದ್ದರು. 40 ದಿನಗಳ ಪಾಕ್ ಪ್ರವಾಸ ಕೈಗೊಳ್ಳುವ ಭಾರತೀಯ ತಂಡ ಸುಮಾರು 40 ನಿಮಿಷ ಕಾಲ ಪ್ರಧಾನಿ ಜೊತೆ ಮಾತುಕತೆ ನಡೆಸಿತು. ಇದಕ್ಕಿಂತ ಮುನ್ನ ರಕ್ಷಣಾ ಇಬ್ಬರು ಸಿಬ್ಬಂದಿಗಳು ಪಾಕಿಸ್ತಾನದಲ್ಲಿ ಒದಗಿಸಲಾಗುವ ರಕ್ಷಣಾ ವ್ಯವಸ್ಥೆಯ ಕುರಿತು ತಂಡಕ್ಕೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತರಬೇತುದಾರ ಜಾನ್ ರೈಟ್, ತಂಡದ ವೈದ್ಯ, ವ್ಯವಸ್ಥಾಪಕ ರತ್ನಾಕರ ಶೆಟ್ಟಿ ತಂಡದ ಜೊತೆಯಿದ್ದರು.
ಭಾರತ 5 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನೊಳಗೊಂಡಂತೆ 40 ದಿನಗಳ ಕಾಲ ಪಾಕ್ ಪ್ರವಾಸದಲ್ಲಿರುತ್ತದೆ. 18 ವರ್ಷಗಳ ಬಳಿಕ ಗೆಲ್ಲುವ ಅಚಲ ವಿಶ್ವಾಸದೊಂದಿಗೆ ಭಾರತ ತಂಡ ಬುಧವಾರ ಪಾಕಿಸ್ತಾನಕ್ಕೆ ತೆರಳಿತು. ಮಾರ್ಚ್ 13ರಂದು ಮೊದಲ ಪಂದ್ಯವಾಡಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications