ಬೆಂಗಳೂರಿನಲ್ಲಿ ಸೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರಿನಲ್ಲಿ ಸೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಸಿನಿಮಾ ಮಂದಿರದಲ್ಲಿ ಅತ್ಯಾಚಾರ, ಮೂವರ ಬಂಧನ
ಸಿನಿಮಾ ನೋಡಲು ಹೋಗಿದ್ದ 18 ಮತ್ತು 20ರ ವಯಸ್ಸಿನ ಸೋದರಿಯರನ್ನು ಸಿನಿಮಾ ಮಂದಿರದಲ್ಲೇ ಅತ್ಯಾಚಾರ ಮಾಡಲಾಗಿದೆ. ಭುವನೇಶ್ವರಿ ನಗರದ ಈ ಸೋದರಿಯರು ಶನಿವಾರ (ಮಾ.6) ರಾತ್ರಿ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಂಜಿ ತೆಲುಗು ಚಿತ್ರ ವೀಕ್ಷಿಸಲು ತೆರಳಿದ್ದರು. ಅವರ ಜೊತೆಯಲ್ಲಿ ಸೋದರ ಸಂಬಂಧಿಯಾಬ್ಬ ಕೂಡ ಸಿನಿಮಾ ನೋಡಲು ಹೋಗಿದ್ದ ಎನ್ನಲಾಗಿದೆ. ಯುವತಿಯರ ಹಿಂದೆ ಕೂತಿದ್ದ ಗುಂಪೊಂದು ಜಗಳಕ್ಕೆ ತೊಡಗಿದ್ದು , ಈ ಜಗಳ ಅತ್ಯಾಚಾರದಲ್ಲಿ ಪರ್ಯವಸಾನಗೊಂಡಿದೆ. ಯುವತಿಯರಿಬ್ಬರೂ ಟಾಯ್ಲೆಟ್‌ಗೆ ಹೋದಾಗ, ಶೌಚಾಲಯಕ್ಕೆ ನುಗ್ಗಿರುವ ಐವರು ಯುವತಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಯುವತಿಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದಿಬ್ಬರು ಇನ್ನೂ ಪತ್ತೆಯಾಗಿಲ್ಲ . ಗೌಡನಪಾಳ್ಯದ ರಾಬರ್ಟ್, ಅಶ್ವತ್ಥ ಹಾಗೂ ಕುಮಾರ್ ಎನ್ನುವವರು ಬಂಧಿತರು. ಮಹದೇವ ಹಾಗೂ ದೇವ ಎನ್ನುವವರು ತಲೆ ಮರೆಸಿಕೊಂಡಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಯುವತಿಯರು ಹಾಗೂ ಐವರು ಆರೋಪಿಗಳು ಕಟ್ಟಡ ನಿರ್ಮಾಣದ ಕಾರ್ಮಿಕರಾಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications