ಚುನಾವಣೆ ತಾಪದಿಂದಾಗಿ ಮೇ 18-19ಕ್ಕೆ ಸಿಇಟಿ ಪರೀಕ್ಷೆ -04
ಚುನಾವಣೆ ತಾಪದಿಂದಾಗಿ ಮೇ 18-19ಕ್ಕೆ ಸಿಇಟಿ ಪರೀಕ್ಷೆ -04
ಮೇ 18ರಂದು ಜೀವಶಾಸ್ತ್ರ -ಗಣಿತ. ಮೇ 19ರಂದು ಭೌತಶಾಸ್ತ್ರ -ರಸಾಯನಶಾಸ್ತ್ರ
ಈ ಮುನ್ನ ನಿಗದಿಪಡಿಸಿದಂತೆ ಮೇ 12 ಮತ್ತು 13ರಂದು ಪರೀಕ್ಷೆ ನಡೆಯಬೇಕಾಗಿತ್ತು . ಆದರೆ, ಮೇ 13 ರಂದು ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಇರುವುದರಿಂದ ಸಿಇಟಿ ಪರೀಕ್ಷೆಗಳನ್ನು ಮೇ 18-19ಕ್ಕೆ ಮುಂದೂಡಲಾಗಿದೆ ಎಂದು ಸಿಇಟಿ ಸೆಲ್‌ನ ವಿಶೇಷಾಧಿಕಾರಿ ಡಿ.ಎನ್.ನಾಯಕ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 18ರಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳು ನಡೆಯಲಿವೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳು ಮೇ 19ರಂದು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಗಡಿನಾಡು ಮತ್ತು ಹೊರನಾಡು ವಿಭಾಗಗಳಲ್ಲಿನ ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಮೇ 20ರಂದು ನಡೆಯಲಿದೆ. ವಾಸ್ತು ಶಿಲ್ಪ ವಿಷಯವನ್ನು ಆಯ್ದುಕೊಂಡಿರುವ ಅಭ್ಯರ್ಥಿಗಳಿಗೆ ಮೇ 11ರಂದು ಆಪ್ಟಿಟ್ಯೂಡ್ ಟೆಸ್ಟ್ ನಡೆಯಲಿದೆ. ಭಾಷಾ ಪರೀಕ್ಷೆ ಮತ್ತು ಆಪ್ಟಿಟ್ಯೂಡ್ ಟೆಸ್ಟ್‌ಗಳು ಬೆಂಗಳೂರಿನ ಸಿಇಟಿ ಸೆಲ್ ಕಚೇರಿಯಲ್ಲಿ ನಡೆಯಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications