ಖ್ಯಾತ ಪತ್ರಕರ್ತ ಶಾರದಾಪ್ರಸಾದ್‌ಗೆ ಮೈಸೂರು ವಿವಿ ಡಿ.ಲಿಟ್
ಖ್ಯಾತ ಪತ್ರಕರ್ತ ಶಾರದಾಪ್ರಸಾದ್‌ಗೆ ಮೈಸೂರು ವಿವಿ ಡಿ.ಲಿಟ್
ಅರ್ಧ ಶತಕದ ಶಿಸ್ತುಬದ್ಧ ವೃತ್ತಿಪರತೆಗೆ ಸಂದ ಮನ್ನಣೆ
79 ರ ಹರೆಯದ ಶಾರದಾ ಪ್ರಸಾದ್ ತಮ್ಮ ವೃತ್ತಿ ಜೀವನವನ್ನು 1945ರಲ್ಲಿ ಚೆನ್ನೈಯಲ್ಲಿರುವ ಇಂಡಿಯನ್‌ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಆರಂಭಿಸಿದರು. 1978-79ರಲ್ಲಿ ಭಾರತೀಯ ಸಂವಹನ ಸಂಸ್ಥೆಯ ನಿರ್ದೇಶಕರಾಗಿದ್ದರು. ಆ ಬಳಿಕ 22 ವರ್ಷಗಳ ಕಾಲ ಪ್ರಧಾನ ಮಂತ್ರಿಗಳ ಪತ್ರಿಕಾ ಸಲಹಾಗಾರರಾಗಿ ಕಾರ್ಯನಿರ್ವಹಿಸಿದರು.
ಶಾರದಾ ಪ್ರಸಾದ್‌ರು ಏಶಿಯನ್‌ಏಜ್ ಪತ್ರಿಕೆಯ ಅಂಕಣಕಾರ, ಜವಹಾರ ಲಾಲ್ ನೆಹರು ಶತಮಾನೋತ್ಸವ ಸಂಚಿಕೆಯ ಸಂಪಾದಕರೂ ಹೌದು. ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಶಾರದಾ ಪ್ರಸಾದ್‌ರಿಗೆ ಸಂದಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications