ಎರಡೇ ನಿಮಿಷ ಮಾತ್ರ! ಇದು ವಿಶ್ವದ ಸಣ್ಣ ಅವಧಿ ಶಾಸನ ಸಭೆ!
ಎರಡೇ ನಿಮಿಷ ಮಾತ್ರ! ಇದು ವಿಶ್ವದ ಸಣ್ಣ ಅವಧಿ ಶಾಸನ ಸಭೆ!
ವಿಶ್ವದಲ್ಲೇ ಅತಿ ಕಡಿಮೆ ಅವಧಿಯ ಶಾಸನಸಭೆ ನಡೆಸಿದ ಮಣಿಪುರ
ಮಾ.3 ರಂದು ನಡೆದ ವಿಧಾನಸಭೆಯ ಮೂರನೇ ದಿನದ ಅಧಿವೇಶನಕ್ಕೆ ತೆಗೆದುಕೊಂಡ ಅವಧಿ ಕೇವಲ ಎರಡು ನಿಮಿಷ ಮಾತ್ರ. ಈ ಅಧಿವೇಶನವನ್ನು ವಿಶ್ವದ ಅತಿ ಸಣ್ಣ ಸಭೆ ಎಂದು ವಿರೋಧ ಪಕ್ಷ ವಾದ ಪ್ರಜಾಸತಾತ್ಮಕ ಜನತಾ ಒಕ್ಕೂಟ (ಡಿಪಿಎ) ಲೇವಡಿ ಮಾಡಿದೆ.
ಸಭಾಧ್ಯಕ್ಷ ಟಿಎನ್ ಹೊಕಿಪ್ 11.00 ಗಂಟೆಗೆ ಆಸೀನರಾದರು. ತಕ್ಷಣವೇ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು. ಆಡಳಿತ ಪಕ್ಷದ (ಎಸ್‌ಪಿಎಫ್) ನಾಯಕರು ಸಹಿ ಹಾಕುತ್ತಿದ್ದಂತೆ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿ ಎಂದು ಹೇಳಿದರು. ಪ್ರಶ್ನೆಯೇ ಇಲ್ಲದ (ವಿರೋಧ ಪಕ್ಷ) ಮೇಲೆ ಉತ್ತರವೇನು ಎಂಬ ಅಭಿಪ್ರಾಯ ವ್ಯಕ್ತ ವಾಯಿತು. ಸಭಾಧ್ಯಕ್ಷರು ಶೀಘ್ರ ಪರಿಹಾರ ಕಾಣಬೇಕಾದ ವಿಷಯಗಳನ್ನು ಪ್ರಸ್ತಾಪಿಸಲು ಹೇಳಿದರು. ಆಡಳಿತ ಪಕ್ಷ ಮೌನವಾಗಿದ್ದಾಗ ಸಭಾಧ್ಯಕ್ಷರು ಸಭೆಯನ್ನು ದಿನದ ಮಟ್ಟಿಗೆ ವಿಸರ್ಜಿಸಿದರು.
(ಪಿಟಿಐ)
Post your views
ಮುಖಪುಟ / ವಾರ್ತೆಗಳು












Click it and Unblock the Notifications