ತೆಲಗಿ ‘ಮಂಪರು ಪರೀಕ್ಷೆ’ಗೆ ಹೈಕೋರ್ಟ್‌ನಿಂದ 2 ತಿಂಗಳು ತಡೆ
ತೆಲಗಿ ‘ಮಂಪರು ಪರೀಕ್ಷೆ’ಗೆ ಹೈಕೋರ್ಟ್‌ನಿಂದ 2 ತಿಂಗಳು ತಡೆ
ಮಂಪರು ಪರೀಕ್ಷೆಗೆ ಎರಡು ತಿಂಗಳ ಕಾಲ ತಡೆ
ಮಾರ್ಚ್ 3ರಂದು ತೆಲಗಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಮೂರ್ತಿ ಎ.ಟಿ.ಮನೋಳಿ ನೇತೃತ್ವದ ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು . ಆದರೆ ಮಂಪರು ಪರೀಕ್ಷೆಯ ವಿರುದ್ಧ ತೆಲಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ರಾಜ್ಯ ಹೈಕೋರ್ಟ್, ಎರಡು ತಿಂಗಳ ಕಾಲ ಮಂಪರು ಪರೀಕ್ಷೆ ನಡೆಸದಿರುವಂತೆ ಬುಧವಾರ ಆದೇಶ ನೀಡಿದೆ.
ಮಂಪರು ಸತ್ಯ ಶೋಧನಾ ಪರೀಕ್ಷೆಯಲ್ಲಿ ಸೋಡಿಯಮ್ ಪೆಂಥನಾಲ್ ನೀಡುವುದರಿಂದ ಮಧುಮೇಹ, ರಕ್ತದೊತ್ತಡ, ಹೃದ್ರೋಗವಿರುವ ತೆಲಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರಬಹುದು ಎಂದು ತೆಲಗಿ ಪರ ವಕೀಲರು ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎ.ಸಿ.ಕಬ್ಬಿನ್, ಮಂಪರು ಪರೀಕ್ಷೆಗೆ ಅಲ್ಪ ವಿರಾಮ ನೀಡಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications