ಅಪ್ಪನಿಗೆ ತಕ್ಕ ಮಗ : ಕಾಂಗ್ರೆಸ್‌ಗೆ ಕುಮಾರ್ ಬಂಗಾರಪ್ಪ ಟಾಟಾ
ಅಪ್ಪನಿಗೆ ತಕ್ಕ ಮಗ : ಕಾಂಗ್ರೆಸ್‌ಗೆ ಕುಮಾರ್ ಬಂಗಾರಪ್ಪ ಟಾಟಾ
ಅಪ್ಪನ ಜೊತೆಯಿರುವುದೇ ತನಗಿಷ್ಟವೆಂದ ಕುಲಪುತ್ರ
ತಂದೆಯ ಕರ್ತವ್ಯಕ್ಕೆ ಮತ್ತು ನಂಬಿಕೆಗೆ ಬದ್ಧನಾದ ಮಗನಾಗಿ, ನನ್ನ ರಾಜಕೀಯ ನಾಯಕ ಮತ್ತು ಮಾರ್ಗದರ್ಶಕರಾದ ಬಂಗಾರಪ್ಪನವರನ್ನು ಅನುಸರಿಸುವ ಉದ್ದೇಶದಿಂದ ಪದವಿ ಮತ್ತು ಪಕ್ಷವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಕುಮಾರ್ ಬಂಗಾರಪ್ಪ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಆಶಾದಾಯಕ ಮತ್ತು ಪ್ರಗತಿಪರ ರಾಜಕೀಯ ಪಕ್ಷವಾಗಿದೆ. ನನ್ನ ತಂದೆಯವರ ಹೊರ ಬರುವಿಕೆಯಿಂದ ಕಾಂಗ್ರೆಸ್ ಪಕ್ಷದ ಬಲ ಕುಸಿದಿದೆ ಮತ್ತು ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಹೇಳಿದ ಕುಮಾರ್ ಬಂಗಾರಪ್ಪ , ಬಿಜೆಪಿಯ ಬಗ್ಗೆ ತಮ್ಮ ಒಲವನ್ನು ತೋರಿದರು.
ಸಿನಿಮಾ ರಂಗದಿಂದ ರಾಜಕೀಯ ಕಣಕ್ಕಿಳಿದ ಕುಮಾರ್ ಬಂಗಾರಪ್ಪ, ತಂದೆಯವರು ಮತ್ತು ನನ್ನ ಜೊತೆ ನಮ್ಮ ಬೆಂಬಲಿಗರೂ ಸಹ ಕಾಂಗ್ರೆಸ್ ತ್ಯಜಿಸುವುದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಬೀಳಲಿದೆ ಎಂದರು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರ್ ಬಂಗಾರಪ್ಪ, ಈ ಬಾರಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರದು ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ತ್ಯಜಿಸುವ ಯಾವುದೇ ಉದ್ದೇಶ ತಮಗಿಲ್ಲದಿದ್ದರೂ ತಂದೆಯವರೊಡನೆ ಇರುವುದೇ ನನಗಿಷ್ಟ ಎಂದು ್ಫಕುಮಾರ್ ಬಂಗಾರಪ್ಪ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications