ಏ.20- 26 ರಂದು ರಾಜ್ಯದಲ್ಲಿ ಚುನಾವಣೆ, ಮೇ13 ಮತಎಣಿಕೆ
ಏ.20- 26 ರಂದು ರಾಜ್ಯದಲ್ಲಿ ಚುನಾವಣೆ, ಮೇ13 ಮತಎಣಿಕೆ
ಮಾರ್ಚ್ 24ರಂದು ಚುನಾವಣಾ ಅಧಿಸೂಚನೆ
ಎರಡನೇ ಹಂತದ ಏಪ್ರಿಲ್ 26ರ ಚುನಾವಣೆಗೆ ಮಾರ್ಚ್ 31 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 7 ಕೊನೆದಿನ. ವಾಪಸ್ಸು ಪಡೆಯಲು ಏಪ್ರಿಲ್ 10 ಕೊನೆದಿನ. ಏಪ್ರಿಲ್ 26ರಂದು ಮತದಾನ ನಡೆಯಲಿದೆ.
ಏಪ್ರಿಲ್ 20ರಂದು ಚುನಾವಣೆ ನಡೆಯುವ ಕ್ಷೇತ್ರಗಳು : ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಕನಕಪುರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬಾಗಲಕೋಟೆ ಹಾಗೂ ಬಿಜಾಪುರ.
ಏಪ್ರಿಲ್ 26 ರಂದು ಚುನಾವಣೆ ನಡೆಯುವ ಕ್ಷೇತ್ರಗಳು : ಮಂಡ್ಯ, ಚಾಮರಾಜನಗರ, ಮೈಸೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೆನರಾ, ಧಾರವಾಡ ಉತ್ತರ, ಧಾರವಾಡ ದಕ್ಷಿಣ, ಬೆಳಗಾವಿ ಹಾಗೂ ಚಿಕ್ಕೋಡಿ.
ಏಪ್ರಿಲ್ 20 ರಂದು 120 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಏಪ್ರಿಲ್ 26ರಂದು 104 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications