‘ಸ್ಟಾಂಪಿಟ್’ ತಂಡದಿಂದ ಮಾ.3ರಂದು ತೆಲಗಿ ಮಂಪರು ಪರೀಕ್ಷೆ
‘ಸ್ಟಾಂಪಿಟ್’ ತಂಡದಿಂದ ಮಾ.3ರಂದು ತೆಲಗಿ ಮಂಪರು ಪರೀಕ್ಷೆ
ತೀರ್ಪು ಬರಹಗಾರರ ಕೊರತೆಯಿಂದಾಗಿ ಮೂರು ಬಾರಿ ಮುಂದೆ ಆದೇಶಕ್ಕೆ ಕೂಡಿ ಬಂದ ಕಂಕಣ
ಛಾಪಾ ಪಾಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಂಶ ತಿಳಿಯಲು ಕರೀಂಲಾಲ ತೆಲಗಿಯನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ‘ಸ್ಟಾಂಪಿಟ್’ ತಂಡ ವಿಶೇಷ ನ್ಯಾಯಾಲಯದ ಅನುಮತಿ ಕೇಳಿತ್ತು . ಸ್ಟಾಂಪಿಟ್‌ನ ಮನವಿ ಪರಿಶೀಲಿಸಿದ ವಿಶೇಷದ ನ್ಯಾಯಾಲಯದ ನ್ಯಾಯಮೂರ್ತಿ ಎ.ಟಿ.ಮನೋಳಿ ಮಾರ್ಚ್ 3ರಂದು ತೆಲಗಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಫೆ.28ರಂದು ಅನುಮತಿ ನೀಡಿದರು.
ಈ ಮುನ್ನ ತೆಲಗಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸ್ಟಾಂಪಿಟ್ ಮೂರು ಬಾರಿ ಮನವಿ ಸಲ್ಲಿಸಿತ್ತು . ಆದರೆ ತೀರ್ಪು ಬರಹಗಾರರ ಕೊರತೆಯಿಂದಾಗಿ ನ್ಯಾಯಮೂರ್ತಿ ಮನೋಳಿ ಆದೇಶವನ್ನು ಮುಂದೂಡಿದ್ದರು. ವಿಶೇಷ ನ್ಯಾಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ನ್ಯಾಯಮೂರ್ತಿ ಮನೋಳಿ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಛಾಪಾ ಪಾಪದ ಕುರಿತು ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ತನಿಖಾ ದಳವಾದ ‘ಸಿಟ್’ ತೆಲಗಿಯನ್ನು ಈಗಾಗಲೇ ಮಂಪರು ಪರೀಕ್ಷೆಗೆ ಒಳಪಡಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications