ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಭಾನುವಾರ: ಫೆ.29ರಂದು ರಾಜ್ಯಾದ್ಯಂತ ವಿದ್ಯುತ್‌ ಖೋತಾ

By Staff
|
Google Oneindia Kannada News

ಕಪ್ಪು ಭಾನುವಾರ: ಫೆ.29ರಂದು ರಾಜ್ಯಾದ್ಯಂತ ವಿದ್ಯುತ್‌ ಖೋತಾ
ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳು

ಬೆಂಗಳೂರು : ರಾಜಧಾನಿ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯಾದ್ಯಂತ ಫೆ.29ರ ಭಾನುವಾರ 8 ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಇರುವುದಿಲ್ಲ .

ಫೆ.29ರ ಬೆಳಗ್ಗೆ 6 ಗಂಟೆಯಿಂದಲೇ ವಿದ್ಯುತ್‌ ಕಡಿತ ಆರಂಭವಾಗಲಿದ್ದು , ಸುಮಾರು 8 ತಾಸುಗಳ ಕಾಲ ವಿದ್ಯುತ್‌ ನಿಲುಗಡೆ ಜಾರಿಯಲ್ಲಿರುತ್ತದೆ. ತಾಲ್ಷೇರ್‌-ಕೋಲಾರ ವಿದ್ಯುತ್‌ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಸಲಿಕ್ಕಾಗಿ ಈ ವಿದ್ಯುತ್‌ ನಿಲುಗಡೆ ಮಾಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ವಿದ್ಯುತ್‌ ನಿಲುಗಡೆಯಿಂದ ಕುಡಿಯುವ ನೀರು ಸರಬರಾಜಿಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳಲ್ಲೂ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.

ವಿದ್ಯುತ್‌ ನಿಲುಗಡೆಯಿಂದಾಗಿ ರಾಜ್ಯದ ನಾಗರಿಕರು ಸ್ವಲ್ಪ ಎಚ್ಚರ ತಪ್ಪಿದರೂ ಭಾನುವಾರದ ರಜಾ ಸಜೆಯಾಗಲಿದೆ. ಟ್ಯಾಂಕ್‌ ಭರ್ತಿಯಾಗಿದೆಯಾ ಎನ್ನುವುದನ್ನು ಶನಿವಾರ ರಾತ್ರಿ ಮಲಗುವ ಮುನ್ನ ಖಚಿತಪಡಿಸಿಕೊಳ್ಳದಿದ್ದರೆ ಭಾನುವಾರ ಬೆಳಗ್ಗೆ ಸ್ನಾನಕ್ಕೂ ಸಂಚಕಾರ !

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X