‘ಚೆನ್ನೈನಲ್ಲಿ ಇನ್ಫೋಸಿಸ್‌ನ ದೇಶದ ಬೃಹತ್ ಸಾಫ್ಟ್‌ವೇರ್‌ಕೇಂದ್ರ’
‘ಚೆನ್ನೈನಲ್ಲಿ ಇನ್ಫೋಸಿಸ್‌ನ ದೇಶದ ಬೃಹತ್ ಸಾಫ್ಟ್‌ವೇರ್‌ಕೇಂದ್ರ’
129 ಎಕರೆ ಪ್ರದೇಶದಲ್ಲಿ 25 ಸಾವಿರ ವೃತ್ತಿಪರರು ಕಾರ್ಯ ನಿರ್ವಹಿಸುವ ಕೇಂದ್ರ
25 ಸಾವಿರ ವೃತ್ತಿಪರರು ಕಾರ್ಯ ನಿರ್ವಹಿಸುವ 1250 ಕೋಟಿ ರುಪಾಯಿ ಅಂದಾಜಿನ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರವನ್ನು ಇನ್ಫೋಸಿಸ್ ನಿರ್ಮಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೇಂದ್ರದ ಶಂಕುಸ್ಥಾಪನೆಯನ್ನು ಫೆ.26ರಂದು ನೆರವೇರಿಸಿದ್ದು , ಈ ಕೇಂದ್ರ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಬೃಹತ್ ಕೇಂದ್ರ ಎನ್ನಲಾಗಿದೆ.
ಚೆನ್ನೈನ ಮಹೀಂದ್ರ ಸಿಟಿಯಲ್ಲಿನ 129 ಎಕರೆ ಪ್ರದೇಶದಲ್ಲಿ ಇನ್ಫೋಸಿಸ್ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ ತಲೆಯೆತ್ತಲಿದೆ. ಈ ಕೇಂದ್ರದ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ಈ ಕೇಂದ್ರದಲ್ಲಿನ ಸೇವೆ ಹಾಗೂ ಸವಲತ್ತುಗಳು ವಿಶ್ವದ ಅತ್ಯುತ್ತಮ ಕೇಂದ್ರದ ಸೇವೆ ಸವಲತ್ತುಗಳನ್ನು ಸರಿಗಟ್ಟುವ ಕುರಿತು ತಮಗೆ ವಿಶ್ವಾಸವಿದೆ ಎಂದು ಇನ್ಫೋಸಿಸ್ ರಾಜಗುರು ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ.
1995ರಿಂದಲೇ ಚೆನ್ನೈ ಮಹಾನಗರದಲ್ಲಿ ಇನ್ಫೋಸಿಸ್‌ನ ಚಟುವಟಿಕೆಗಳು ಆರಂಭಗೊಂಡಿದ್ದವು. ಆದರೆ ಪ್ರಸ್ತುತ ನಿರ್ಮಿಸುತ್ತಿರುವ ಬೃಹತ್ ಸಾಫ್ಟ್‌ವೇರ್ ಕೇಂದ್ರದ ಮೂಲಕ ಚೆನ್ನೈ ಮಹಾನಗರದ ಮೇರು ಸಂಸ್ಥೆಯಾಗಿ ಇನ್ಫೋಸಿಸ್ ರೂಪುಗೊಳ್ಳಲಿದೆ.
(ಏಜನ್ಸೀಸ್)
ಮುಖಪುಟ / ಐಟಿ - ಬಿಟಿ












Click it and Unblock the Notifications