Get Updates
Get notified of breaking news, exclusive insights, and must-see stories!

ಬಿಜೆಪಿ ಸದಸ್ಯತ್ವ ಬೇಕಾ?

ಬಿಜೆಪಿ ಸದಸ್ಯತ್ವ ಬೇಕಾ? www.bjpkarnataka.org ಕ್ಲಿಕ್ಕಿಸಿ
ವೆಬ್‌ಸೈಟ್‌ ಮೂಲಕ ಬಿಜೆಪಿ ಕುರಿತು ಪ್ರಚಾರ, ಕಾಂಗ್ರೆಸ್‌ ದುರಾಚಾರ ಬಯಲು

ಬೆಂಗಳೂರು: ರಾಜ್ಯ ಬಿಜೆಪಿ ಘಟಕ ತನ್ನ ವೆಬ್‌ಸೈಟ್‌ ಪ್ರಾರಂಭಿಸಿದ್ದು , ವೆಬ್‌ಸೈಟ್‌ ಮೂಲಕ ಹೈಟೆಕ್‌ ಮಂದಿಯನ್ನು ತಲುಪುವ ಪ್ರಯತ್ನ ನಡೆಸಲಿದೆ.

ಪಕ್ಷದ ಕುರಿತ ಮಾಹಿತಿಯು ಬಿಜೆಪಿ ನೂತನ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು , ಆನ್‌ಲೈನ್‌ ಮೂಲಕವೇ ಪಕ್ಷದ ಸದಸ್ಯತ್ವ, ಅರ್ಜಿ ಸ್ವೀಕಾರವೂ ಸಾಧ್ಯವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ಕುಮಾರ್‌ www.bjpkarnataka.org ಗೆ ಫೆ.25 ರ ಬುಧವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಯಡಿಯೂರಪ್ಪ, ರಾಮಚಂದ್ರ ಗೌಡ, ಡಿ.ಎಚ್‌. ಶಂಕರಮೂರ್ತಿ ಮುಂತಾದವರು ಹಾಜರಿದ್ದರು.

www.bjpkarnataka.org ಕನ್ನಡ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಮಾಹಿತಿ ಹೊಂದಿದೆ. ದೇಶದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಪಕ್ಷದ ಸದಸ್ಯತ್ವ ನೀಡುವ ವ್ಯವಸ್ಥೆ ಈ ವೈಬ್‌ಸೈಟ್‌ನಲ್ಲಿದ್ದು , ಭಾವಚಿತ್ರ ಸಮೇತ ಅರ್ಜಿಯನ್ನು ರವಾನಿಸಿದರೆ ಅವರ ಮನೆಬಾಗಿಲಿಗೆ ಸದಸ್ಯತ್ವ ರಶೀದಿ ನೀಡುವ ವ್ಯವಸ್ಥೆ ಇಲ್ಲಿದೆ.

ಬಿಜೆಪಿ ಉನ್ನತ ನಾಯಕರ ಪರಿಚಯ ಹಾಗೂ ಪಕ್ಷದ ದೈನಂದಿನ ಕಾರ್ಯಕ್ಯಮಗಳ ವೇಳಾಪಟ್ಟಿಯೂ www.bjpkarnataka.org ನಲ್ಲಿದೆ. ಕಾಂಗೈ ಹಗರಣಗಳ ಸಂಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿದ್ದು , ಈ ವೆಬ್‌ಸೈಟ್‌ಗೆ ನೂತನ ಮಾಹಿತಿ ಆಗಾಗ ಸೇರ್ಪಡೆಯಾಗುತ್ತಿರುತ್ತದೆ ಎಂದು ಪಕ್ಷದ ವಕ್ತಾರ ಸುರೇಶ್‌ ಕುಮಾರ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+