ಶಾಂತಿ ಧ್ವಜದಡಿ ಅರಳುತ್ತಿರುವ ಜಮ್ಮು-ಕಾಶ್ಮೀರ ಪ್ರವಾಸೋದ್ಯಮ
ಶಾಂತಿ ಧ್ವಜದಡಿ ಅರಳುತ್ತಿರುವ ಜಮ್ಮು-ಕಾಶ್ಮೀರ ಪ್ರವಾಸೋದ್ಯಮ
15 ವರ್ಷಗಳಲ್ಲಿ ಕಾಣದ ಪ್ರವಾಸಿಗಳ ಕಲರವ ಈಗ ಸೌಂದರ್ಯ ಕೊಳ್ಳದಲ್ಲಿ ಕೇಳಿಸುತ್ತಿದೆ.
2003ರಲ್ಲಿ ಪ್ರವಾಸಿಗರ ಸಂಖ್ಯೆ 2.31 ಲಕ್ಷ ಇತ್ತು. 2002 ನೇ ಇಸವಿಗಿಂತ 2003ರಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದುದು ಕೇವಲ 18,000. ಈ ಹೆಚ್ಚಳ ದಿನೇ ದಿನೇ ಹೆಚ್ಚುತ್ತಿದ್ದು , ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಬಾಂಧವ್ಯದ ಬೆಸುಗೆಯೂ ಬೆಳೆಯುತ್ತಿದೆ. ವರ್ಷದಲ್ಲಿ ಹತ್ತಾರು ಬಾರಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ೇಟಿ ನೀಡುತ್ತಿದ್ದಾರೆ.
2004ರ ಅಂತ್ಯದೊಳಗೆ ಪ್ರವಾಸಿಗರ ಸಂಖ್ಯೆ 6 ಲಕ್ಷ ಮುಟ್ಟುವ ಭರವಸೆಯನ್ನು ಜಮ್ಮು ಮತ್ತು ಕಾಶ್ಮೀರದ ಸರ್ಕಾರ ಹೊಂದಿದೆ. ಜಮ್ಮು ರಾಜ್ಯ ಪ್ರವಾಸೋದ್ಯಮ ಇಲಾಖೆ ಸಿನಿಮಾ ನಿರ್ಮಾಪಕರಿಗೂ ಬೆಂಬಲ ನೀಡುತ್ತಿದೆ. ಆ ಮೂಲಕ ಪ್ರವಾಸೋದ್ಯಮವೂ ಬೆಳೆಯುತ್ತದೆ. ಜೊತೆಗೆ ದೇಶ ದೇಶಗಳ ಜನರು ಪರಸ್ಪರ ಬೆರೆಯುವಂತಾಗಿ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ.
ಪ್ರವಾಸಿಗರ ಸಂಖ್ಯೆ 2002 ರಲ್ಲಿ 7 ಲಕ್ಷ ದಾಟಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ . ಈ ಬಾರಿ ಮಾತ್ರ ಅದನ್ನು ಸಾಧಿಸಿಯೇ ಸಿದ್ಧ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಿ.ಎ.ಮಿರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications