ಮುಂಬಯಿ ಕತ್ತಲ ಮೋಜಿಗೆ ಪೊಲೀಸರ ಟಾರ್ಚ್ ! ಸಾವಿರ ಸೆರೆ
ಮುಂಬಯಿ ಕತ್ತಲ ಮೋಜಿಗೆ ಪೊಲೀಸರ ಟಾರ್ಚ್ ! ಸಾವಿರ ಸೆರೆ
ರಾತ್ರಿಯಿಡೀ ತೆರೆದ ಬಾರ್ ಮತ್ತು ನೈಟ್‌ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ, ಬೆಚ್ಚಿಬಿದ್ದ ಮಹಾನಗರ
ಮುಂಬಯಿ ಮಹಾನಗರಿಯ ಉತ್ತರ, ದಕ್ಷಿಣ, ಮಧ್ಯ ಮುಂಬಯಿಯಲ್ಲಿ ದಾಳಿ ನಡೆಸಲಾಗಿದೆ. ಈ ಕೇಂದ್ರಗಳಲ್ಲಿ ಅವ್ಯಾಹತವಾಗಿ ಕೀಳು ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಅದನ್ನು ತಡೆಗಟ್ಟ ಬೇಕಾಗಿದೆ. ಹಾಗೂ ಸರಕಾರಿ ಕಾನೂನು ಉಲ್ಲಂಘಿಸಿ ರಾತ್ರಿ ಅವಧಿ ಮೀರಿ ನಡೆಸುವ ಬಾರ್‌ಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯು ಪೊಲೀಸ್ ಇಲಾಖೆಯ ಡಿಸಿಪಿಗಳು, ಸಹಾಯಕ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ನಡೆದಿದೆ. ಈ ದಾಳಿಯ ನೇತೃತ್ವವನ್ನು ಹೊಸದಾಗಿ ಅಧಿಕಾರ ವಹಿಸಿಕೊಂಡ ಮುಂಬಯಿ ಪೋಲೀಸ್ ಆಯುಕ್ತ ಎ.ಎನ್.ರಾಯ್ ವಹಿಸಿದ್ದರು.
ಬಂಧಿತರನ್ನು ನಗರದ ವಿವಿಧ ಮೆಟ್ರೋಪೊಲಿಟನ್ ಕೋರ್ಟ್‌ಗಳಲ್ಲಿ ಬುಧವಾರ ಹಾಜರು ಪಡಿಸಲಾಯಿತು. ನೈಟ್‌ಕ್ಲಬ್‌ಗಳ ಕಾರ್ಯವ್ಯಾಪ್ತಿಯಾಳಗೆ ಬರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications