ಬೆಂಗಳೂರಲ್ಲಿ ಭೀಮಸೇನ್‌ ಜೋಷಿ

ಬೆಂಗಳೂರಲ್ಲಿ ಭೀಮಸೇನ್‌ ಜೋಷಿ
ಮಾರ್ಚ್‌ 7ರಂದು ವಸಂತನಗರದ ಅಂಬೇಡ್ಕರ್‌ ಭವನದಲ್ಲಿ ಹಾಡುಹಬ್ಬ

Pundit Bhimsen Joshiಬೆಂಗಳೂರು : ವಿಶಿಷ್ಟ ಶೈಲಿಯ ಅದ್ಭುತ ಸಂಗೀತಗಾರ ಪಂಡಿತ್‌ ಭೀಮಸೇನ್‌ ಜೋಷಿ ಅವರ ಸಂಗೀತ ಕಚೇರಿ ಮಾರ್ಚ್‌ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರಿನ ವಸಂತನಗರ ಬಡಾವಣೆಯ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಾರ್ಚ್‌ 7ರ ಸಂಜೆ 6.30ರಿಂದ ಭೀಮಸೇನ್‌ ಜೋಷಿ ಅವರ ಸಂಗೀತ ಕಚೇರಿ ಆರಂಭವಾಗುವುದು. ಈ ಕಚೇರಿಯಲ್ಲಿ ವಿಶಿಷ್ಟ ಸಂಯೋಜನೆಗಳಾದ- ಭಾಗ್ಯದಾ ಲಕ್ಷ್ಮಿ ಬಾರಮ್ಮಾ , ಕರುಣಿಸೊ ರಂಗ ಕರುಣಿಸೊ, ಸಕಲು ಜಗತು ಕೊ ಕರ್ತಾರ್‌ ಮುಂತಾದ ರಚನೆಗಳನ್ನು ಭೀಮಸೇನ್‌ ಜೋಷಿ ಹಾಡುವರು.

ರಿದಮ್ಸ್‌ ಸಾಂಸ್ಕೃತಿಕ ಸಂಘಟನೆ ಭೀಮಸೇನ್‌ ಜೋಷಿ ಅವರ ಸಂಗೀತ ಕಚೇರಿಯನ್ನು ಏರ್ಪಡಿಸಿದೆ. ಸಂಗೀತ ಕಚೇರಿ, ಸಂಗೀತ ರಸಸಂಜೆ, ಉಪನ್ಯಾಸ, ದತ್ತಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ರಿದಮ್ಸ್‌ ತನ್ನನ್ನು ತೊಡಗಿಸಿಕೊಂಡಿದೆ.

ಟಿಕೆಟುಗಳ ಬೆಲೆ 500 ರುಪಾಯಿ ಮತ್ತು 249 ರುಪಾಯಿ. ಟಿಕೇಟುಗಳ ಉಚಿತ ಡೆಲಿವರಿ ಹಾಗೂ ಸಗಟು ಖರೀದಿಗಾಗಿ (080) 23560078, 23131913 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+