ಅಮ್ಮನಾದ 63 ರ ಅಜ್ಜಿ ; ನಾಲ್ಕು ದಶಕ ನಂತರ ನೀಗಿದ ಬಂಜೆತನ
ಅಮ್ಮನಾದ 63 ರ ಅಜ್ಜಿ ; ನಾಲ್ಕು ದಶಕ ನಂತರ ನೀಗಿದ ಬಂಜೆತನ
ಈರೋಡಿನ ಆಸ್ಪತ್ರೆಯಲ್ಲಿ ಬ್ಲಾಸ್ಟೊ-ಸಿಸ್ಟ್-ಕಲ್ಚರ್ ಮೂಲಕ ಮುದುಕಿಗೆ ಸಂತಾನ
ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವಾದ ಬ್ಲಾಸ್ಟೊ-ಸಿಸ್ಟ್-ಕಲ್ಚರ್ ಮೂಲಕ 63ರ ಹೆಂಗಸು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಮಗು 1.75 ಕೇಜಿ ತೂಕವಿದೆ ಎಂದು ಹೆರಿಗೆ ಮಾಡಿಸಿರುವ ಈರೋಡ್‌ನ ಮಾರುತಿ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಯ ಅಧ್ಯಕ್ಷ ಡಾ.ಸದಾಶಿವಂ ತಿಳಿಸಿದ್ದಾರೆ.
ಮದುವೆಯಾಗಿ 40 ವರ್ಷಗಳಾಗಿದ್ದರೂ ಈ ಹೆಂಗಸು ಗರ್ಭ ಧರಿಸಿರಲಿಲ್ಲ . ಮಗುವಿಗಾಗಿ ಅನೇಕ ಆಸ್ಪತ್ರೆಗಳಿಗೆ ಎಡತಾಕಿದ ಈ ಹೆಂಗಸು, 2003ರ ಜುಲೈನಲ್ಲಿ ಮಾರುತಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದಳು. ಆಕೆಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ ಎಂದು ಸದಾಶಿವಂ ಹೇಳಿದರು.
20 ವರ್ಷಗಳ ಹಿಂದೆಯೇ ಈ ಹೆಂಗಸಿಗೆ ಮುಟ್ಟು ನಿಂತಿದೆ. ಮುದುಕಿ ರಕ್ತದೊತ್ತಡದಿಂದ ಬಳಲುತ್ತಿದ್ದಾಳೆ. ಆ ಕಾರಣದಿಂದಾಗಿ ಮಗುವಿನ ಬೆಳವಣಿಗೆಗೆ ವಿಶೇಷ ಔಷಧಿಗಳನ್ನು ನೀಡಬೇಕಾಯಿತು. ಮುದುಕಿಯ 74ರ ವಯಸ್ಸಿನ ಗಂಡನಿಂದ ವೀರ್ಯ ಪಡೆದು, ಆ ವೀರ್ಯ ಹಾಗೂ ಮುದುಕಿಯ ಅಂಡಾಣುವನ್ನು ಪ್ರನಾಳವೊಂದರಲ್ಲಿ ಅಭಿವೃದ್ಧಿಪಡಿಸಲಾಯಿತು. ಐದು ದಿನಗಳ ನಂತರ ಜೀವಕಣಗಳನ್ನು ಮುದುಕಿಯ ಗರ್ಭಕೋಶಕ್ಕೆ ಬ್ಲಾಸ್ಟೊ -ಸಿಸ್ಟ್-ಕಲ್ಚರ್ ತಂತ್ರಜ್ಞಾನದ ಮೂಲಕ ರವಾನಿಸಲಾಯಿತು ಎಂದು ಸದಾಶಿವಂ ತಿಳಿಸಿದರು.
ಏಳು ತಿಂಗಳ ಹಿಂದೆ ಒರಿಸ್ಸಾದಲ್ಲಿ ಕೂಡ ಇಂಥದ್ದೇ ಅಪರೂಪದ ಘಟನೆ ವರದಿಯಾಗಿದ್ದು , 64 ರ ಹೆಂಗಸು ಮಗುವಿಗೆ ಜನ್ಮ ನೀಡಿದ್ದಳು ಎಂದು ಡಾ.ಸದಾಶಿವಂ ಹೇಳಿದರು.
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications