ಕೇಂದ್ರ ಮತ್ತು ರಾಜ್ಯ ಸರ್ಕಾರಿನೌಕರರಿಂದ ಫೆ.24ರಂದು ಮುಷ್ಕರ
ಕೇಂದ್ರ ಮತ್ತು ರಾಜ್ಯ ಸರ್ಕಾರಿನೌಕರರಿಂದ ಫೆ.24ರಂದು ಮುಷ್ಕರ
ನೌಕರರ ಮುಷ್ಕರದ ಹಕ್ಕನ್ನು ನಿಷೇಧಿಸಿರುವ ಸುಪ್ರಿಂಕೋರ್ಟು ತೀರ್ಪಿಗೆ ಅಸಮಾಧಾನ
ಸರ್ಕಾರಿ ನೌಕರರ ಸಂಘಟನೆಗಳು ಮಾತ್ರವಲ್ಲದೆ ಕೇಂದ್ರದ ಪ್ರಮುಖ ಸಂಘಟನೆಗಳು ಹಾಗೂ ಹಣಕಾಸು ಸಂಸ್ಥೆಗಳು ಈ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ. ನೌಕರರ ಮುಷ್ಕರದ ಹಕ್ಕನ್ನು ನಿಷೇಧಿಸಿರುವ ಸುಪ್ರಿಂಕೋರ್ಟಿನ ಕ್ರಮದ ಹಿನ್ನೆಲೆಯಲ್ಲಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಸುಬ್ಬರಾವ್ ಹೇಳಿದರು.
ಮುಷ್ಕರದ ಹಕ್ಕನ್ನು ನಿಷೇಧಿಸಿರುವ ಸುಪ್ರಿಂಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಉಂಟಾಗಿರುವ ಸಂದಿಗ್ಧತೆಯನ್ನು ಬಗೆಹರಿಸುವುದಾಗಿ ಪ್ರಧಾನಿ ವಾಜಪೇಯಿ ಹಾಗೂ ಕೇಂದ್ರ ಕಾರ್ಮಿಕ ಸಚಿವ ಸಾಹಿಬ್ ಸಿಂಗ್ ವರ್ಮ ಕಳೆದ ಸೆಪ್ಟಂಬರ್‌ನಲ್ಲಿಯೇ ಆಶ್ವಾಸನೆ ನೀಡಿದ್ದರು. ಆದರೆ ಈನಿಟ್ಟಿನಲ್ಲಿ ಈವರೆಗೂ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಸುಬ್ಬರಾವ್ ದೂರಿದರು.
ಜನರ ಹಿತಾಸಕ್ತಿಗೆ ತಕ್ಕಂತೆ ಆರ್ಥಿಕ ನೀತಿಗಳನ್ನು ರೂಪಿಸುವಂತೆ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ ಎಂದೂ ಅನಂತಸುಬ್ಬರಾವ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications