ಆ ಪಕ್ಷ ಈ ಪಕ್ಷ ಎನಲಾರೆ, ಎಲ್ಲರೂ ಎನಗೆ ಒಂದೇ ಎಂದ ಕಪಿಲ್
ಆ ಪಕ್ಷ ಈ ಪಕ್ಷ ಎನಲಾರೆ, ಎಲ್ಲರೂ ಎನಗೆ ಒಂದೇ ಎಂದ ಕಪಿಲ್
ಒಳ್ಳೆಯ ಜನರ ಗುಂಪಿಗೆ ಮಾಜಿ ಕ್ರಿಕೆಟ್ ತಾರೆ ಕಪಿಲ್‌ದೇವ್ ಬೆಂಬಲ
ಇಲ್ಲ , ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ . ಯಾವುದೇ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸುವುದೂ ಇಲ್ಲ ಎಂದು ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್‌ದೇವ್ ಹೇಳಿದರು.
ನನಗೆ ಯಾವ ಪಕ್ಷದ ಕುರಿತೂ ಪಕ್ಷಪಾತವಿಲ್ಲ . ಲೋಕಸಭೆಗೆ ಒಳ್ಳೆಯ ಜನ ಪ್ರವೇಶಿಸಬೇಕು ಎನ್ನುವುದಷ್ಟೇ ತಮ್ಮ ಬಯಕೆ. ಪಕ್ಷ ಮುಖ್ಯವಲ್ಲ ; ಜನರು ಮುಖ್ಯ ಎಂದು ಕಪಿಲ್ ಹೇಳಿದರು. ಒಂದುವೇಳೆ ಗೆಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ಪರ ಪ್ರಚಾರ ಮಾಡುವುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಕಪಿಲ್ ಬಳಿ ಉತ್ತರವಿರಲಿಲ್ಲ .
ನನ್ನ ಪಾಲಿಗೆ ಎಲ್ಲರೂ ಒಂದೇ. ಯಾವುದಾದರೂ ಒಂದು ನಿಖರ ಪಕ್ಷವನ್ನು ಬೆಂಬಲಿಸುವುದು ಸರಿಯೆನ್ನಿಸುತ್ತಿಲ್ಲ . ಆದರೆ, ಒಳ್ಳೆಯ ಜನರ ಒಂದು ಗುಂಪನ್ನು ಬೆಂಬಲಿಸಲಿಕ್ಕೆ ಅಡ್ಡಿಯಿಲ್ಲವೆನ್ನಿಸುತ್ತದೆ ಎಂದು ಕಪಿಲ್ ಮಾತುಗಳನ್ನು ತೂಕ ಮಾಡುತ್ತಾ ಹೇಳಿದರು.
ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕುರಿತು ತಮಗೆ ತೃಪ್ತಿಯಿದೆ ಎಂದು ಕಪಿಲ್ ಹೇಳಿದರು. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಕಾರ್ಯವೈಖರಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕಪಿಲ್- ಈ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಾರೆ. ಆದರೆ ಸರ್ಕಾರವನ್ನು ಗೌರವಿಸುತ್ತೇನೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications