ತೆಲಗಿ ವಿಚಾರಣೆ ನಡೆಸಲು ಸಿಬಿಐಗೆ ನ್ಯಾಯಾಲಯದ ಅನುಮತಿ
ತೆಲಗಿ ವಿಚಾರಣೆ ನಡೆಸಲು ಸಿಬಿಐಗೆ ನ್ಯಾಯಾಲಯದ ಅನುಮತಿ
ಮಾರ್ಚ್ 10ರಂದು ಮೂವರು ಅಧಿಕಾರಿಗಳ ನಿಯೋಗದಿಂದ ತನಿಖೆ
ಒಂದು ದಿನದ ಮಟ್ಟಿಗೆ ತೆಲಗಿಯ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ ನೀಡುವ ಮಹತ್ವದ ತೀರ್ಮಾನವನ್ನು ವಿಶೇಷ ನ್ಯಾಯಾಲಯ ಗುರುವಾರ (ಫೆ.19) ಕೈಗೊಂಡಿತು. ಮಾರ್ಚ್ 10ರಂದು ತೆಲಗಿಯ ವಿಚಾರಣೆ ನಡೆಸಬಹುದು ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎ.ಟಿ.ಮನೋಳಿ ಗುರುವಾರ ಆದೇಶ ನೀಡಿದರು.
ಡಿಐಜಿ, ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ದರ್ಜೆಯ ಮೂವರು ಸಿಬಿಐ ಅಧಿಕಾರಿಗಳು ತೆಲಗಿಯನ್ನು ಮಾರ್ಚ್ 10ರಂದು ಪ್ರಶ್ನಿಸಬಹುದು. ಈ ವಿಚಾರಣೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆಯಲಿದೆ ಎಂದು ನ್ಯಾಯಮೂರ್ತಿ ಮನೋಳ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications