Get Updates
Get notified of breaking news, exclusive insights, and must-see stories!

ಹುಬ್ಬಳ್ಳಿಯಲ್ಲಿ ರಾಜ್ಯದ ಮಹಿಳಾ ವಾಣಿಜ್ಯೋದ್ಯಮಿಗಳ‘ಸಖಿ-04’

ಹುಬ್ಬಳ್ಳಿಯಲ್ಲಿ ರಾಜ್ಯದ ಮಹಿಳಾ ವಾಣಿಜ್ಯೋದ್ಯಮಿಗಳ‘ಸಖಿ-04’
ಫೆ.21ರಿಂದ 9 ದಿನಗಳ ಕಾಲ ಗಾಜಿನಮನೆಯಲ್ಲಿ ಪ್ರದರ್ಶನ-ಮಾರಾಟ

ಹುಬ್ಬಳ್ಳಿ : ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನವಾದ ‘ಸಖಿ 2004’ ಮೇಳ ಹುಬ್ಬಳ್ಳಿಯಲ್ಲಿ ಶನಿವಾರದಿಂದ (ಫೆ.21) ಪ್ರಾರಂಭವಾಗಲಿದೆ.

ಕರ್ನಾಟಕ ಮಹಿಳಾ ವಾಣಿಜ್ಯೋದ್ಯಮಿಗಳ ಒಕ್ಕೂಟ ‘ಸಖಿ 2004’ ಮೇಳವನ್ನು ಆಯೋಜಿಸಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸುವುದು ಈ ಮೇಳದ ಉದ್ದೇಶ ಎಂದು ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯ ಕುಲಕರ್ಣಿ ಹಾಗೂ ಕಾರ್ಯದರ್ಶಿ ದೇವಕಿ ತಿಳಿಸಿದ್ದಾರೆ.

ಹುಬ್ಬಳ್ಳಿಯ ಗಾಜಿನಮನೆಯಲ್ಲಿ 9 ದಿನಗಳ ಕಾಲ ‘ಸಖಿ 2004’ ಮೇಳ ನಡೆಯಲಿದೆ. ಉತ್ತರ ಕರ್ನಾಟಕದ ಮಹಿಳೆಯರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ಉದೊಂದು ಉತ್ತಮ ವೇದಿಕೆಯಾಗಲಿದೆ. ಸುಮಾರು 70 ಸ್ಟಾಲ್‌ಗಳು ಮೇಳದಲ್ಲಿ ಇರಲಿದ್ದು , ಇದರಲ್ಲಿ 55 ಸ್ಟಾಲ್‌ಗಳನ್ನು ಜಿಲ್ಲಾ ಕೇಂದ್ರಗಳ ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ ಎಂದು ಸೌಭಾಗ್ಯ ಮತ್ತು ದೇವಕಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+