ಬಿಜೆಪಿ ಆಲಿಂಗನದಿ ಬಾಲಿವುಡ್ ‘ಕನಸಿನ ಕನ್ಯೆ’ ಹೇಮಾ ಮಾಲಿನಿ
ಬಿಜೆಪಿ ಆಲಿಂಗನದಿ ಬಾಲಿವುಡ್ ‘ಕನಸಿನ ಕನ್ಯೆ’ ಹೇಮಾ ಮಾಲಿನಿ
ಚುನಾವಣೆಗೆ ಸ್ಪರ್ಧೆ ಇಲ್ಲ , ಪಕ್ಷದ ಪರ ಪ್ರಚಾರಕ್ಕೆ ಸಿದ್ಧ
ಬಿಜೆಪಿ ರಾಷ್ಟ್ರಾಧ್ಯಕ್ಷ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಹೇಮಾ ಮಾಲಿನಿ (ಫ.19ರ ಗುರುವಾರ), ಪಕ್ಷದ ಒಲವು ನಿಲುವುಗಳನ್ನು ಮೆಚ್ಚಿ ತಾವು ಬಿಜೆಪಿ ಸೇರಿದ್ದಾಗಿ ತಿಳಿಸಿದರು. ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿಯೂ ಹೇಮಾ ಮಾಲಿನಿ ಹೇಳಿದರು.
ಈ ಮುನ್ನ ಸಿನಿಮಾಗಳ ಬಿಜಿ ಶೆಡ್ಯೂಲ್‌ನಿಂದಾಗಿ ಬಿಜೆಪಿಯ ಸದಸ್ಯತ್ವ ಪಡೆದಿರಲಿಲ್ಲ . ಈಗ ಕಾಲ ಕೂಡಿ ಬಂದಿದೆ ಎಂದ ಹೇಮಾಮಾಲಿನಿ, ತಾವು ಪ್ರಧಾನಿ ವಾಜಪೇಯಿ ಅವರ ಬಹುದೊಡ್ಡ ಅಭಿಮಾನಿ ಎಂದರು.
ಮುಂಬರುವ ಚುನಾವಣೆಗಳಲ್ಲಿ ಹೇಮಾ ಮಾಲಿನಿ ಸ್ಪರ್ಧಿಸುವ ಸಾಧ್ಯತೆಗಳನ್ನು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಜೆಪಿ ಅಧ್ಯಕ್ಷ ವೆಂಕಯ್ಯ ನಾಯ್ಡು ತಳ್ಳಿಹಾಕಿದರು. ಆಕೆ ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮಕರಣ ಹೊಂದಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ ಎಂದು ನಾಯ್ಡು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications