ಬ್ಯಾಡಗಿ ಮೆಣಸು : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂ1 ಬೆಲೆ
ಬ್ಯಾಡಗಿ ಮೆಣಸು : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂ1 ಬೆಲೆ
ಅದರ ಖಾರಕ್ಕೆ ಮತ್ತು ಬಣ್ಣಕ್ಕೆ ಮಾರುಹೋದ ಮಾರುಕಟ್ಟೆ
ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜರ್ಮನಿಯ ನಿಯೋಗ ಈ ವಿಷಯ ತಿಳಿಸಿತು. ಮೆಣಸಿನ ಕಾಯಿಯಿಂದ ಉತ್ಪಾದಿಸುವ ನೈಸರ್ಗಿಕ ಬಣ್ಣ ಕ್ಕೆ (ಓಲಿಯೋ ರೆಸಿನ್) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಎಂದು ನಿಯೋಗ ತಿಳಿಸಿತು.
ಇಥಿಯೋಪಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೆಣಸಿನ ಕಾಯಿಯಿಂದ ಉತ್ಪಾದಿಸುವ ಬಣ್ಣದಲ್ಲಿ ಗಾಢತೆ ಕಡಿಮೆ ಇದೆ. ಆದರೆ ಕರ್ನಾಟಕ ಮತ್ತು ಆಂಧ್ರದಲ್ಲಿರುವ ಮೆಣಸಿನಕಾಯಿಗೆ ನೈಸರ್ಗಿಕ ಬಣ್ಣದ ಗಾಢತೆ ಹೆಚ್ಚಿರುವುದರಿಂದ ಇದಕ್ಕೆ ಬೇಡಿಕೆ ಅಧಿಕವಾಗಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications