ಮಧುಗಿರಿ ಬೆಟ್ಟಕ್ಕೆ ವಿದ್ಯುತ್ತು , ಕುಡಿಯಾ ನೀರಿಗೆ18 ಕೋಟಿ ವೆಚ್ಚ
ಮಧುಗಿರಿ ಬೆಟ್ಟಕ್ಕೆ ವಿದ್ಯುತ್ತು , ಕುಡಿಯಾ ನೀರಿಗೆ18 ಕೋಟಿ ವೆಚ್ಚ
ಹೇಮಾವತಿ ನದಿಯಿಂದ ಮಧುಗಿರಿ ನೀರು ಹರಿಸುವ ಯೋಜನೆಗೆ ಚಾಲನೆ
ಹೇಮಾವತಿಯಿಂದ ಮಧುಗಿರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ (ಫೆ.15) ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್- ಕುಡಿಯುವ ನೀರು ಪೂರೈಕೆಗೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ಎಂದು ಭರವಸೆ ನೀಡಿದರು.
ಸಿದ್ಧಾಪುರ ಕಾಲುವೆಯಿಂದ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಆದರೆ ಕುಡಿಯುವ ನೀರಿಗೆ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ. ಕುಡಿಯುವ ನೀರು ಪೂರೈಕೆ ಯೋಜನೆ ಇನ್ನೊಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು.
ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಮಧುಗಿರಿ ಪಟ್ಟಣಕ್ಕೆ 2.5 ಕೋಟಿ ರುಪಾಯಿ ಮಂಜೂರಾಗಿದೆ. ಇದಲ್ಲದೆ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆನ್ನುವ ಖ್ಯಾತಿಯ ಮಧುಗಿರಿ ಏಕಶಿಲಾ ಬೆಟ್ಟಕ್ಕೆ 15 ಲಕ್ಷ ರುಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪಕ ಕಲ್ಪಿಸುವ ಯೋಜನೆಗೂ ಹಸಿರು ನಿಶಾನೆ ದೊರೆತಿರುವುದಾಗಿ ಸಚಿವ ಪರಮೇಶ್ವರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications