ಬೇಡಿಕೆ ಕುಸಿತ : ‘ಹಕ್ಕಿ ಜ್ವರ’ದ ವದಂತಿಗಳಿಗೆ ಕೋಳಿ ಬೆಲೆ ಬಲಿ !
ಬೇಡಿಕೆ ಕುಸಿತ : ‘ಹಕ್ಕಿ ಜ್ವರ’ದ ವದಂತಿಗಳಿಗೆ ಕೋಳಿ ಬೆಲೆ ಬಲಿ !
ಮೀನು ಹಾಗೂ ಕುರಿಮೇಕೆಗಳ ಮಾಂಸಕ್ಕೆ ಹೆಚ್ಚಿದ ಬೇಡಿಕೆ
ಭಾರತದ ಎಲ್ಲೆಡೆ ಕೋಳಿ ವ್ಯಾಪಾರ ಗಣನೀಯವಾಗಿ ಕುಸಿದಿದೆ. ನಾಗರಿಕರು ಈಗ ರೋಗವಿದೆ ಎಂದು ತಿಳಿದು ಕೋಳಿ ಬದಲಾಗಿ ಮೀನು ಹಾಗೂ ಕುರಿಮೇಕೆಗಳ ಮಾಂಸ ತಿನ್ನಲಾರಂಭಿಸಿದ್ದಾರೆ. ಇದು ಕೋಳಿ ಉದ್ಯಮದ ಮೇಲೆ ಆರ್ಥಿಕವಾಗಿ ಬಲವಾದ ಹೊಡೆತ ನೀಡಿದೆ.
ಕೋಳಿಜ್ವರದ ವದಂತಿಯಿಂದಾಗಿ ಪ್ರೋಟೀನ್ ಕಡಿಮೆ ಇರುವವರು ಸಹ ಕೋಳಿ ಆಹಾರ ತ್ಯಜಿಸಿದ್ದಾರೆ. ಇದರಿಂದಾಗಿ ರೈತರನ್ನು ಒಳಗೊಂಡಂತೆ ಕೋಳಿ ಉದ್ಯಮದ ಅಧಃಪತನವಾಗುತ್ತಿದೆ ಎಂದು ಮಾಜಿ ಉಪ ಆಯುಕ್ತ (ಕೋಳಿ ಸಾಕಣೆ) ಡಾ.ಎಮ್. ರಾತ್ ಹೇಳಿದ್ದಾರೆ.
ಹಕ್ಕಿ ಜ್ವರ ಸಾಂಕ್ರಾಮಿಕ ರೋಗವಲ್ಲ. ಕೀಟಾಣುಗಳು ಅಷ್ಟು ಸುಲಭದಲ್ಲಿ ಪಸರಿಸುವುದಿಲ್ಲ. ಆದರೂ ಯಾರೋ ಕಿಡಿಗೇಡಿಗಳು ಯಶಸ್ವಿಯಾಗಿ ಪಸರಿಸಿದ ಅಪಸ್ವರದಿಂದ ಜನ ಪ್ರಭಾವಕ್ಕೆ ಒಳಗಾಗಿದ್ದು , ಋಣಾತ್ಮಕ ಅಭಿಪ್ರಾಯ ತೀವ್ರವಾಗಿ ಬೆಳೆಯುತ್ತಿದೆ ಎಂದು ರಾತ್ ಹೇಳಿದರು.
ಮುಂಜಾಗ್ರತೆಯು ಮದ್ದಿಗಿಂತ ಉತ್ತಮ. ಅದಕ್ಕೆ ನಾನು, ನಮ್ಮ ಕಂಪೆನಿ ಸಿಬ್ಬಂದಿಗಳೆಲ್ಲ ಕೋಳಿ ಹಾಗೂ ಮೊಟ್ಟೆ ತಿನ್ನುವುದನ್ನು ತ್ಯಜಿಸಿದ್ದೇವೆ ಎಂಬುದು ಕೋಳಿಯನ್ನು ಆಹಾರವಾಗಿ ಸೇವಿಸುವ ಒಬ್ಬರ ಅಭಿಪ್ರಾಯ. ಆದರೆ ಕೋಳಿ ಸಾಕಣೆಗಾರ ಫ್ರೊ.ಅನೂಪ್ ಮಿಶ್ರ ಹೇಳುವಂತೆ ‘ಕೋಳಿ ಜ್ವರ ಬಂದರೆ ಸಾಕಾಣೆಗಾರರಿಗೆ ತೊಂದರೆಯೇ ಹೊರತು ಕೋಳಿ ತಿನ್ನುವವರಿಗಲ್ಲ’.
ಅಧ್ಯಯನಗಳ ಪ್ರಕಾರ ಕೋಳಿ ಮಾಂಸವನ್ನು ಶೈತ್ಯಾಗೃಹದಲ್ಲಿ ಇಡುವುದರಿಂದ ಈ ರೋಗದ ವೈರಸ್ ಸಾಯುವುದಿಲ್ಲ. ಆದರೆ ಮಾಂಸ ಬೇಯಿಸಿದರೆ ಸಾಯುತ್ತದೆ. ಬೆಂದ ಕೋಳಿ ತಿಂದರೆ ಪರವಾಗಿಲ್ಲ . ಈ ಮಧ್ಯೆ ಮೀನಿನ ಬೆಲೆ ಹಕ್ಕಿಯಂತೆ ಗಗನಕ್ಕೇರಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications