ವಿಷ ! ಕೋಟಿ ರು.ಮೌಲ್ಯದ ವಿಷ ಮಂಗಳೂರಲ್ಲಿ ಪೊಲೀಸ್ ವಶ
ವಿಷ ! ಕೋಟಿ ರು.ಮೌಲ್ಯದ ವಿಷ ಮಂಗಳೂರಲ್ಲಿ ಪೊಲೀಸ್ ವಶ
ಮೂವತ್ತು ದಿನಗಳಲ್ಲಿ ಮುನ್ನೂರು ಹಾವುಗಳಿಂದ ವಿಷ ಅಪಹರಣ
ಪ್ರಮುಖ ಆರೋಪಿ ಸುರೇಶ್, ಮತ್ತೊಬ್ಬ ಬಂಧಿತ ಆರೋಪಿಯ ಜೊತೆ ಮೊದಲೇ ವ್ಯವಹಾರ ಕುದುರಿಸಿದ್ದರು. 15 ಲಕ್ಷ ರೂಪಾಯಿ ಮೌಲ್ಯದ ವಿಷವನ್ನು ಐಸ್ ತುಂಬಿದ ಥರ್ಮಾಕಾಲ್ ಪೆಟ್ಟಿಗೆಯಲ್ಲಿಟ್ಟಿದ್ದರು. ಈ ವಿಷವನ್ನು ಪಾಶ್ಚಾತ್ಯ ದೇಶಗಳಿಗೆ ರವಾನೆ ಮಾಡುವ ಸಂದರ್ಭದಲ್ಲಿ ಹಿಡಿಯಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೋಟಾರು ಬೈಕಿನಲ್ಲಿ ಥರ್ಮಾಕಾಲ್ ಪೆಟ್ಟಿಗೆಯನ್ನು ಹಿಡಿದು ಪ್ರಯಾಣಿಕರನ್ನು ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ. ಆರೋಪಿಗಳ ವಿಚಾರಣೆಯ ನಂತರ ಅವರು ಹಾವುಗಳನ್ನು ಹಿಡಿದು ಇಂಜಕ್ಷನ್ ಮೂಲಕ ವಿಷವನ್ನು ಹೀರುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳು ಒಂದು ತಿಂಗಳ ಅವಧಿಯಲ್ಲಿ ಸುಮಾರು ಮುನ್ನೂರು ಹಾವುಗಳಿಂದ ವಿಷವನ್ನು ತೆಗೆದಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications