ಬಾರಮ್ಮ ಪ್ರಿಯಾಂಕ, ಬಾರಯ್ಯ ರಾಹುಲನೆ , ನಿಮಗೆ ಜಯವಾಗಲಿ
ಬಾರಮ್ಮ ಪ್ರಿಯಾಂಕ, ಬಾರಯ್ಯ ರಾಹುಲನೆ , ನಿಮಗೆ ಜಯವಾಗಲಿ
ರಾಜಕಾರಣಕ್ಕೆ ಯುವರಕ್ತದ ಸೇರ್ಪಡೆಗೆ ಮತದಾರರ ಒಲವು -ಔಟ್‌ಲುಕ್ ಸಮೀಕ್ಷೆ
ಇಂಗ್ಲಿಷ್ ನಿಯತಕಾಲಿಕೆ ‘ಔಟ್‌ಲುಕ್’ ಪತ್ರಿಕೆಯ ಮಾರುಕಟ್ಟೆ ಮತ್ತು ಸಂಶೋಧನಾ ವಿಭಾಗ ನಡೆಸಿರುವ ಸಮೀಕ್ಷೆಯ ಪ್ರಕಾರ- ಪ್ರಿಯಾಂಕ ವಧೇರ ಹಾಗೂ ರಾಹುಲ್ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶಿಸಿದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಸಾಕಷ್ಟು ಉತ್ತಮಗೊಳ್ಳುವುದು ಎಂದು ಶೇ.69 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾಂಕ- ರಾಹುಲ್ ಆಗಮನದಿಂದ ರಾಜಕಾರಣಕ್ಕೆ ಯುವರಕ್ತದ ಪ್ರವೇಶವಾಗುತ್ತದೆ. ರಾಜಕಾರಣಕ್ಕೆ ಅವರ ಸೇರ್ಪಡೆ ಸ್ವಾಗತಾರ್ಹ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರೆ- ಕೆಲವರು ಸೋನಿಯಾ ಮಕ್ಕಳು ಪಕ್ಷದ ಕುರಿತು ಪ್ರಚಾರ ಮಾಡಿದರೆ ಸಾಕು, ರಾಜಕೀಯಕ್ಕೆ ಸೇರ್ಪಡೆಯಾಗುವುದು ಬೇಡ ಎಂದಿದ್ದಾರೆ.
ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಪಾಟ್ನಾ , ಲಕ್ನೋ, ಮುಂಬಯಿ, ಪುಣೆಗಳಲ್ಲಿ ಹಾಗೂ ಈ ನಗರಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿ ಔಟ್‌ಲುಕ್-ಎಂಡಿಆರ್‌ಎ ಸಮೀಕ್ಷೆ ನಡೆಸಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications