ದೊಡ್ಡಬಳ್ಳಾಪುರದಲ್ಲಿ ರೇಮಂಡ್ಸ್‌ನಿಂದ 30 ಕೋಟಿ ರೂ. ಘಟಕ
ದೊಡ್ಡಬಳ್ಳಾಪುರದಲ್ಲಿ ರೇಮಂಡ್ಸ್‌ನಿಂದ 30 ಕೋಟಿ ರೂ. ಘಟಕ
ರೋಗಗ್ರಸ್ತ ಘಟಕಕ್ಕೆ ಅತ್ಯಾಧುನಿಕ ರೂಪ
ದೊಡ್ಡಬಳ್ಳಾಪುರದಲ್ಲಿ ರೇಮಂಡ್ಸ್ ಕಂಪನಿ ತನ್ನ ಉತ್ಪಾದನಾ ಕಂಪನಿಯನ್ನು ಸ್ಥಾಪಿಸಲಿದೆ. ಈ ಘಟಕಕ್ಕೆ 30 ಕೋಟಿ ರುಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ. ಆದರೆ ಈ ಕುರಿತ ಅಧಿಕೃತ ಪ್ರಸ್ತಾವನೆಯಿನ್ನೂ ಸರ್ಕಾರಕ್ಕೆ ತಲುಪಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿನ ರೋಗಗ್ರಸ್ತ ಘಟಕವೊಂದನ್ನು ರೇಮಂಡ್ಸ್ ಕಂಪನಿ ತನ್ನ ವಶಕ್ಕೆ ತೆಗೆದುಕೊಂಡಿದ್ದು , ಈ ಘಟಕವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಆಧುನೀಕರಿಸಲಿದೆ ಎಂದು ಸಚಿವ ದೇಶಪಾಂಡೆ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications