ಸಿಇಟಿ-2004 : ಮೇ12, 13 ಪರೀಕ್ಷೆ , ಪರರಾಜ್ಯದವರಿಗೆ ನಿಷೇಧ
ಸಿಇಟಿ-2004 : ಮೇ12, 13 ಪರೀಕ್ಷೆ , ಪರರಾಜ್ಯದವರಿಗೆ ನಿಷೇಧ
ಖಾಸಗಿ ಕಾಲೇಜುಗಳ ಮೇನೇಜ್‌ಮೆಂಟ್ ಕೋಟಾ ಪರರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯ
ಮೆಡಿಕಲ್, ಡೆಂಟಲ್, ಆಯುರ್ವೇದ, ಹೋಮಿಯೋಪತಿ, ಯುನಾನಿ, ಯೋಗ ಮತ್ತು ನ್ಯಾಚುರೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಪ್ರವೇಶ ಕಲ್ಪಿಸಲಾಗುವುದು. ಈ ವರ್ಷದಿಂದ ಫಾರ್ಮಸಿ, ನರ್ಸಿಂಗ್ ಮತ್ತು ಫಿಸಿಯೋಥೆರಪಿ ಪದವಿ ಕಾಲೇಜುಗಳ ಪ್ರವೇಶವನ್ನೂ ಸಿಇಟಿ ಮೂಲಕ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಈ ವರ್ಷದಿಂದ ಸಿಇಟಿ ಪರೀಕ್ಷೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದೆ. ಹೊರನಾಡು, ಗಡಿನಾಡು ಕನ್ನಡಿಗರು ಸೇರಿದಂತೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಖಾಸಗಿ ವೃತ್ತಿಪರ ಕಾಲೇಜುಗಳ ಒಕ್ಕೂಟವಾದ ಕಾಮೆಡ್‌ೃಕೆ ನಡೆಸುವ ಪ್ರವೇಶ ಪರೀಕ್ಷೆಗೆ ಪರರಾಜ್ಯದ ಅಭ್ಯರ್ಥಿಗಳು ಕೂರಬಹುದು. ಸುಪ್ರಿಂಕೋರ್ಟ್ ಆದೇಶದ ಅನ್ವಯ- ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಪ್ರವೇಶ, ಶುಲ್ಕ ನಿಗದಿ ಇತ್ಯಾದಿ ಪ್ರಕ್ರಿಯೆಗಳನ್ನು ಪೂರೈಸುವ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಿಗೆ ನ್ಯಾಯಮೂರ್ತಿಗಳಾದ ಮುಳಗುಂದ್ ಮತ್ತು ವೆಂಕಟರಮಣ ಅವರನ್ನು ಹೈಕೋರ್ಟ್ ಸೂಚಿಸಿದೆ ಎಂದು ಸಚಿವ ಪರಮೇಶ್ವರ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications