ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಏ.2ರಂದು ಸಾಮೂಹಿಕ ವಿವಾಹಮೇಳ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಏ.2ರಂದು ಸಾಮೂಹಿಕ ವಿವಾಹಮೇಳ
ಹೆಸರು ನೋಂದಣಿಗೆ ಮಾರ್ಚ್ 28 ಕೊನೆದಿನ
ಏಪ್ರಿಲ್ 2 ರಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಮೇಳ ನಡೆಯುತ್ತಿದ್ದು , ಆಸಕ್ತರು ಮಾರ್ಚ್ 28ರೊಳಗೆ ಹೆಸರುಗಳನ್ನು ನೋಂದಾಯಿಸಬೇಕು. ಹೆಸರುಗಳನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಧರ್ಮಸ್ಥಳದ ಕಚೇರಿಯನ್ನು ಸಂಪರ್ಕಿಸಬಹುದು. ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ಆಗಿರಬೇಕಾದ್ದು ಕಡ್ಡಾಯ.
1972ರಿಂದಲೂ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಗಳು ಪ್ರತಿವರ್ಷವೂ ನಡೆಯುತ್ತಿವೆ. ಈವರೆಗೆ 9803 ಜೋಡಿಗಳು ಧರ್ಮಸ್ಥಳದಲ್ಲಿ ಮದುವೆಯ ಬಂಧನಕ್ಕೆ ಒಳಗಾಗಿವೆ ಎಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ. ಜನ ಸಾಮಾನ್ಯರ ಮದುವೆಗೆ ನೆರವಾಗುವುದು ಹಾಗೂ ವರದಕ್ಷಿಣೆಯ ಪದ್ಧತಿಯನ್ನು ಕೊನೆಗಾಣಿಸುವುದು ಈ ಸಾಮೂಹಿಕ ಮದುವೆ ಮೇಳದ ಉದ್ದೇಶ.
ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲದ ಧರ್ಮಾಧಿಕಾರಿಯವರ ವಿಳಾಸ : ಶ್ರೀ ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, ದಕ್ಷಿಣ ಕನ್ನಡ - 574216.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications