ಸೇಲ್ಸ್‌ಟ್ಯಾಕ್ಸ್ ಹೆಚ್ಚಳ? ಫೆ.1ರಿಂದ ಪೆಟ್ರೋಲ್/ಡೀಸೆಲ್ ದುಬಾರಿ..
ಸೇಲ್ಸ್‌ಟ್ಯಾಕ್ಸ್ ಹೆಚ್ಚಳ? ಫೆ.1ರಿಂದ ಪೆಟ್ರೋಲ್/ಡೀಸೆಲ್ ದುಬಾರಿ..
ಮೂಲಭೂತ ವ್ಯವಸ್ಥೆಗಳು-ರಸ್ತೆ ಕಾಮಗಾರಿ ಯೋಜನೆಗಳಿಗೆ ಹೆಚ್ಚುವರಿ ನಿಧಿ ಬಳಕೆ
ಮಾರಾಟ ತೆರಿಗೆಯ ಮೇಲೆ ಶೇ.15ರಷ್ಟು ಸೆಸ್ ಹೇರಲು ಸರ್ಕಾರ ಉದ್ದೇಶಿಸಿದ್ದು , ಈ ನಿಧಿಯನ್ನು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಹಾಗೂ ರಸ್ತೆ ಕಾಮಗಾರಿ ಯೋಜನೆಗಳಿಗೆ ಉಪಯೋಗಿಸಲು ಚಿಂತಿಸಿದೆ. ಹೆಚ್ಚುವರಿ ಲೆವಿ ಹೇರಿಕೆ ಕುರಿತ ಪ್ರಕಟಣೆಯನ್ನು ಜನವರಿ 31ರೊಳಗೆ ವಾಣಿಜ್ಯ ತೆರಿಗೆ ಇಲಾಖೆ ಪ್ರಕಟಿಸುವ ಸಾಧ್ಯತೆಯಿದೆ. ಫೆಬ್ರವರಿ 1ರಿಂದ ಶೇ.25ರಷ್ಟು ಲೆವಿಯನ್ನು ಮಾರಾಟ ತೆರಿಗೆ ಮೇಲೆ ಹೇರಲು ಮುಖ್ಯಮಂತ್ರಿ ಕೃಷ್ಣ ಸರ್ಕಾರ ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ.
ಸಾಮೂಹಿಕ ಬಳಕೆಯ ಕೆಲವು ವಸ್ತುಗಳಿಗೆ ನೂತನ ಲೆವಿ ಹೇರಿಕೆಯಿಂದ ವಿನಾಯಿತಿ ನೀಡಲಾಗುವುದು. ಸಂಗ್ರಹವಾಗುವ ನಿಧಿಯಲ್ಲಿ ಪ್ರತಿಶತ 10ರಷ್ಟನ್ನು ರಸ್ತೆ ಕಾಮಗಾರಿಗಳಿಗೆ, ಉಳಿದ ಶೇ.5ನ್ನು ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಒದಗಿಸಲಾಗುವುದು. ಸ್ಟಾಂಪ್ಸ್ ಮತ್ತು ನೋಂದಣಿ ಹಾಗೂ ಸಾರಿಗೆ ಇಲಾಖೆಯಲ್ಲೂ ಫೆ.1ರಿಂದ ನೂತನ ಲೆವಿ ಜಾರಿಗೆ ಬರಲಿದೆ ಎನ್ನಲಾಗಿದೆ.
ಹೆಚ್ಚಿನ ಲೆವಿಯಿಂದಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 1.25 ರು. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 55 ಪೈಸೆ ದುಬಾರಿಯಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications