Get Updates
Get notified of breaking news, exclusive insights, and must-see stories!

ಜೇಕ್‌ ಬೈಲಿ ಎನ್ನುವ ಶಯನ ವೈದ್ಯ !

ಜೇಕ್‌ ಬೈಲಿ ಎನ್ನುವ ಶಯನ ವೈದ್ಯ !
ಕೃಷ್ಣನಿಗೆ ಹದಿನಾರು, ಭರತನಿಗೆ 96 ಸಾವಿರ ಮಂದಿ ಹೆಂಡತಿಯರಿದ್ದರಂತೆ ; ಇವರೆಲ್ಲ ನಮ್ಮ ಮೆಚ್ಚಿನ ಪೌರಾಣಿಕ ಪ್ಲೇಬಾಯ್‌ಗಳು !! ಇಲ್ಲೊಬ್ಬ ಆಧುನಿಕ ಮದನನಿದ್ದಾನೆ . ಈತ ಸಾವಿರಾರು ಹೆಂಗಸರಿಗೆ ಅವರಿಗಂಟಿಕೊಂಡ ಕಾಯಿಲೆಗಳಿಂದ ಮುಕ್ತಿ ನೀಡಿದ್ದಾನೆ ; ಅವರೊಂದಿಗೆ ಮಲಗುವ ಮೂಲಕ !

  • ದಟ್ಸ್‌ಕನ್ನಡ ಬ್ಯೂರೊ
ಜೇಕ್‌ ಬೈಲಿ. ಲಂಡನ್ನಿನವ. ಎಷ್ಟು ಬೇಟೆಯಾಡಿದರೂ ದಣಿಯದ ಗುರಿಕಾರ ; ಈತನದೇನಿದ್ದರೂ ಲೈಂಗಿಕ ಶಿಕಾರಿ. ಹೀಗೆಂದರೆ ಬೈಲಿಗೆ ಸಿಟ್ಟು ಬರುತ್ತದೆ. ಆತನ ಪ್ರಕಾರ ಆತನದು ಸಮಾಜ ಸೇವೆ. ಈ ದ್ವಂದ್ವ ಪಕ್ಕಕ್ಕಿರಲಿ- ‘ದಿ ಮಿರರ್‌’ ಪತ್ರಿಕೆಯಲ್ಲಿ ಪ್ರಕಟವಾದ ಈ ಸ್ವಾರಸ್ಯಕರ ಕಥಾನಕ ಓದಿ :

ಲೈಂಗಿಕ ವಿಷಯದಲ್ಲಿ ಪ್ರತಿಯಾಬ್ಬರಿಗೂ ಏನಾದರೂಂದು ಸಮಸ್ಯೆ ಇದ್ದೇ ಇರುವುದು ಸ್ವಾಭಾವಿಕ. ಒಳಮನಸ್ಸಿನಲ್ಲಿ ನೂರಕ್ಕೆ ಮುಕ್ಕಾಲು ಮಂದಿ ಕಾಮಾತುರರಾದರೂ, ಬಹಿರಂಗವಾಗಿ ಮಡಿವಂತರು ಹೆಚ್ಚು. ಹಾಗೆ ನೋಡಿದರೆ ತುಂಬಾ ಮಂದಿ ಲೈಂಗಿಕ ಅಜ್ಞಾನಿಗಳು. ಬೆಂಗಳೂರಿನಂಥ ಊರಿನ ಸಂದಿಗೊಂದಿಗಳಲ್ಲಿನ ಲೈಂಗಿಕ ರೋಗಗಳ ಕ್ಲಿನೆಕ್‌ಗಳೆಂಬ ಅಡ್ಡೆಗಳು ಜನ ಸಾಮಾನ್ಯರ ಲೈಂಗಿಕ ಅಜ್ಞಾನಕ್ಕೆ ಸಾಕ್ಷಿಯಂತಿವೆ.

ಇದು ಬೆಂಗಳೂರಿನ ಮಂದಿಯ ತೊಳಲಾಟ ಮಾತ್ರವಲ್ಲ , ವಿಶ್ವದ ಬಹುತೇಕ ಜನರು ಲೈಂಗಿಕವಾಗಿ ಅಶಿಕ್ಷಿತರೇ ಎನ್ನುತ್ತಾರೆ 61 ರ ಹೊಸ್ತಿಲ ‘ಯುವಕ’ ಜೇಕ್‌ ಬೈಲಿ. ಈತನ ಅಭಿಮಾನಿಗಳು ಹೇಳುವಂತೆ ಈತ ಗುರು, ಕಾಮದೇವ, ಆಧುನಿಕ ವಾತ್ಸಾಯನ ! ಈತ ಧನಿಕನೂ ಹೌದು.

ಬ್ರಿಸ್ಟೊಲ್‌ ನಗರದ ಸಮೀಪದ ಯಾಟ್‌ ಪ್ರದೇಶದ ಬಹುತೇಕ ಜನರಿಗೆ ಜೇಕ್‌ ಓರ್ವ ಗಡ್ಡಧಾರಿ ಮನುಷ್ಯ ಎಂದಷ್ಟೇ ಪರಿಚಿತ. ಆದರೆ ಜಗತ್ತಿನ ಎಲ್ಲೆಡೆ ವ್ಯಾಪಿಸಿರುವ ಇವನ ಭಕ್ತರಿಗೆ, ಈತನೊಬ್ಬ ಕಾಮ ತಂತ್ರಗಳನ್ನು ಕರತಲಾಮಲಕ ಮಾಡಿಕೊಂಡಿರುವ ಪಾರಂಗತ, ಪುರುಷೋತ್ತಮ.

ಜೇಕ್‌ ಓರ್ವ ಕಾಮಾಂಧನೇ ? ಆತ ಹೇಳಿಕೊಳ್ಳುವ ಪ್ರಕಾರ, ಕಳೆದ 40 ವರ್ಷಗಲ್ಲಿ ಜೇಕ್‌ 2000 ಹೆಂಗಸರೊಂದಿಗೆ ಮಲಗಿದ್ದಾನೆ. ಆದರೆ ತಾನು ಕಾಮಾಂಧ ಎನ್ನುವುದನ್ನು ಮಾತ್ರ ಆತ ಒಪ್ಪುವುದಿಲ್ಲ . ನನ್ನ ಜೊತೆ ಮಲಗಿದ ಅನೇಕ ಹೆಂಗಸರು ಸಾಮಾಜಿಕ ಅಸ್ಪೃಶ್ಯರು. ಅವರಲ್ಲಿ ಅನೇಕರಿಗೆ ಮಾರಣಾಂತಿಕ ರೋಗಗಳಿದ್ದವು. ನಾನು ಯಾವುದೇ ಪ್ರಶಂಸೆಗಾಗಿ ಇವರೊಂದಿಗೆ ಮಲಗಿಲ್ಲ . ಗಂಡಸರು ಯಾವ ಹೆಣ್ಣನ್ನು ಮುಟ್ಟುವುದಕ್ಕಿಂತ ಸಾಯುವುದೇ ಮೇಲು ಎಂದು ದೂರವಿಡುತ್ತಾರೋ ಅಂಥವರೊಡನೆ ಮಲಗಿರುವೆ ಎಂದು ಜೇಕ್‌ ಹೇಳುತ್ತಾನೆ.

ನನ್ನ ಜೊತೆ ಮಲಗಿದ ಹೆಂಗಸರು ಮಧ್ಯ ವಯಸ್ಸಿನವರು, ಬೊಜ್ಜು ದೇಹದವರು, ಎಲ್ಲಕ್ಕಿಂಥ ಮುಖ್ಯವಾಗಿ ನನ್ನ ಜೊತೆ ಮಲಗಲು ಸ್ವಇಚ್ಛೆಯಿಂದ ಒಪ್ಪಿಕೊಂಡವರು. ಅವರಾರೂ ಮಿನಿ ಲಂಗ ತೊಟ್ಟ ಯುವತಿಯರಲ್ಲ ಎಂದು ಜೇಕ್‌ ತನ್ನ ಪಲ್ಲಂಗ ಪುರಾಣಕ್ಕೆ ಸಮರ್ಥನೆ ನೀಡುತ್ತಾನೆ.

ಇದೆಲ್ಲಾ ಸರಿ, ಆ ಹೆಂಗಸರೇಕೆ ಜೇಕ್‌ಗೆ ಮುಗಿಬಿದ್ದರು ? ಜೇಕ್‌ ಅಭಿಮಾನಿಗಳು ಹೇಳುವ ಪ್ರಕಾರ- ಜೇಕ್‌ ಕಾಮಗುರು ಮಾತ್ರವಲ್ಲ , ಆತನೊಬ್ಬ ಪವಾಡ ಪುರುಷನೂ ಹೌದು. ಆತನ ಜೊತೆ ಮಲಗಿದ ಹೆಂಗಸರ ಕಾಯಿಲೆಗಳು ವಾಸಿಯಾಗಿವೆ. ಒಬ್ಬಾಕೆಗೆ ಕ್ಯಾನ್ಸರ್‌ ಇತ್ತು , 25ರ ತರುಣಿಗೆ ಕಿಡ್ನಿಯಲ್ಲಿ ಕಲ್ಲಿತ್ತು , ಮತ್ತೊಬ್ಬಾಕೆಗೆ ಮತ್ತೊಂದು ಕಾಯಿಲೆಯಿತ್ತು - ಇವೆಲ್ಲ ಕಾಯಿಲೆಗಳು ಜೇಕ್‌ ಜೊತೆ ಮಲಗಿದ್ದರಿಂದ ವಾಸಿಯಾಗಿವೆಯಂತೆ. ಜೇಕ್‌ ಹೇಳುವುದೂ ಇದನ್ನೇ !

ಶುದ್ಧ ರೂಪದಲ್ಲಿ ಲೈಂಗಿಕತೆ ಎನ್ನುವುದು ಹೊಲಸಲ್ಲ ; ಅದು ಪವಿತ್ರವಾದುದು ಮತ್ತು ಆಧ್ಯಾತ್ಮಿಕವಾದುದು ಎನ್ನುವುದು ಜೇಕ್‌ ಕಂಡುಕೊಂಡ ಸತ್ಯ.

ಜೇಕ್‌ ಗುಂಡರಗೋವಿಯಲ್ಲ . ಆತನಿಗೆ ಮಡದಿಯಿದ್ದಾಳೆ, ಮಕ್ಕಳೂ ಇದ್ದಾರೆ. 43 ವರ್ಷದ ಹೆಣ್ಣುಮಗಳು ಕ್ಲೇರ್‌ಗೆ ತನಗಿಂತ 18 ವರ್ಷ ಹಿರಿಯವನಾದ ಗಂಡನ ಸಾಮರ್ಥ್ಯದ ಕುರಿತು ಇನ್ನಿಲ್ಲದ ಹೆಮ್ಮೆ .

ಶ್ರೀಮತಿ ಕ್ಲೇರ್‌ಗೆ 10 ವರ್ಷಗಳಿಂದ ತಿಂಡಿಪೋತ ರೋಗವಿತ್ತಂತೆ. ತಿಂದ ಮೇಲೆ ಸುಮ್ಮನಿರಲಾದೀತೆ- ದಿನಕ್ಕೆ ಅನೇಕ ಸಲ ಶೌಚಕ್ಕೆ ಹೋಗಲೇಬೇಕು. ಆಕೆಯ ಪುಣ್ಯ ನೋಡಿ- ಗಂಡನ ದಯದಿಂದಾಗಿ ಯದ್ವಾತದ್ವಾ ತಿನ್ನುವ ರೋಗದಿಂದ ಈಗ ಮುಕ್ತಿ ದೊರೆತಿದೆ. ಕ್ಲೇರ್‌ ಪುಣ್ಯಾತಗಿತ್ತಿ .

ಜೇಕ್‌-ಕ್ಲೇರ್‌ ದಂಪತಿಗಳಿಗೆ ಏಳು ಮಕ್ಕಳು. ಜೇಕ್‌ ಜೊತೆ ಮಲಗಿದ ಹೆಂಗಸರಿಗೆ ಮಕ್ಕಳಾಗಿವೆಯಾ ? ತಿಳಿದುಬಂದಿಲ್ಲ .

Post your views

ಮುಖಪುಟ / ವಾಟ್ಸ್‌ ಹಾಟ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+