ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಹಕ್ಕಿ’ಜ್ವರ ಶೋಧನಾ ಜಾಲ !
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಹಕ್ಕಿ’ಜ್ವರ ಶೋಧನಾ ಜಾಲ !
ದಕ್ಷಿಣ ಪೂರ್ವ ಏಷ್ಯಾ ಮತ್ತು ಪಾಕಿಸ್ತಾನಗಳಿಂದ ಬರುವ ಪ್ರಯಾಣಿಕರ ತಪಾಸಣೆ
ಹಕ್ಕಿಜ್ವರ ಪೀಡಿತ ಪ್ರದೇಶಗಳಿಂದ ಬರುವವರಲ್ಲಿ ಅನುಮಾನ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಈ ರೋಗಾಣು ಸಾಂಕ್ರಾಮಿಕ ಗುಣ ಹೊಂದಿದ್ದು ಅಪಾಯಕಾರಿಯಾಗಿದೆ. ನಗರದ ಹೃದ್ರೋಗ ಕೇಂದ್ರಗಳಿಗೆ ಹಲವಾರು ಪಾಕಿಸ್ತಾನಿ ನಾಗರಿಕರು ಚಿಕಿತ್ಸೆಗೆಂದು ಬರುತ್ತಿದ್ದಾರೆ. ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಿಂದಲೂ ಪ್ರಯಾಣಿಕರ ದಂಡೇ ಬರುತ್ತಿದ್ದು, ಅವರುಗಳಿಗೆ ನೇರ ಸೇವಾ ಸೌಲಭ್ಯ ಒದಗಿಸಲಾಗಿದೆ.
ಇದುವರೆಗೂ ಕೇಂದ್ರ ಸರ್ಕಾರದಿಂದ ಮುಂಜಾಗ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಯೋಜನೆ ಸೂಚಿತವಾಗಿಲ್ಲ ಎಂದು ಕೇಂದ್ರ ಕೈಗಾರಿಕಾ ಭಧ್ರತಾ ಮಂಡಳಿಯ ಹಿರಿಯ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ. ಭಧ್ರತಾ ಮಂಡಳಿಯು ಬೆಂಗಳೂರಿನ ರಕ್ಷಣಾದಳದ ಸಹಾಯ ಪಡೆದು ಕಾರ್ಯ ನಿರ್ವಹಿಸುತ್ತಿದೆ. ಭಧ್ರತಾ ಮಂಡಳಿ ವೈದ್ಯರ ನೆರವು ಪಡೆದು ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಸುತ್ತಿದೆ.
ಹಕ್ಕಿಜ್ವರವು ಮತ್ತೊಮ್ಮೆ ರಾಜ್ಯ ಮತ್ತು ಕೆಂದ್ರದ ಅಧಿಕಾರಿಗಳಿಗೆ ಸಾರ್ಸ್ ಆಸ್ಫೋಟದ ಕಹಿನೆನಪನ್ನು ತರುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications