ಬಿಎಸ್‌ಎನ್‌ಎಲ್ : ಸದ್ಯದಲ್ಲೇ ಮಾರುಕಟ್ಟೆಗೆ 5ಲಕ್ಷ ಸಿಮ್‌ಕಾರ್ಡ್
ಬಿಎಸ್‌ಎನ್‌ಎಲ್ : ಸದ್ಯದಲ್ಲೇ ಮಾರುಕಟ್ಟೆಗೆ 5ಲಕ್ಷ ಸಿಮ್‌ಕಾರ್ಡ್
ಬೆಂಗಳೂರು ಟೆಲಿಫೋನ್ ಡೈರೆಕ್ಟರಿ-2003-04 ಬಿಡುಗಡೆ
ಕರ್ನಾಟಕ ಟಿಲಿಕಾಂ ವೃತ್ತ ವ್ಯಾಪ್ತಿಯಲ್ಲಿ ಇನ್ನೂ 5 ಲಕ್ಷ ಸಿಮ್‌ಕಾರ್ಡ್‌ಗಳನ್ನು ವಿತರಿಸಲು ಬಿಎಸ್‌ಎನ್‌ಎಲ್ ಉದ್ದೇಶಿಸಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ರಾಜ್ಯದಲ್ಲಿ 8.5 ಲಕ್ಷ ತಲುಪುವುದು ಎಂದು ವೃತ್ತದ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಪದ್ಮನಾಭನ್ ತಿಳಿಸಿದ್ದಾರೆ. ಬೆಂಗಳೂರು ಟೆಲಿಫೋನ್ ಡೈರೆಕ್ಟರಿ -2003-04 ನ್ನು ಬಿಡುಗಡೆ ಮಾಡಿ ಪದ್ಮನಾಭನ್ ಮಾತನಾಡುತ್ತಿದ್ದರು.
ಹೆದ್ದಾರಿಗಳಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಸಂಪರ್ಕ ಸೇವೆ ಉತ್ತಮಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಎಸ್‌ಎಲ್ ಸಂಪರ್ಕಗಳಿಗೆ ಗ್ರಾಹಕರು ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಪದ್ಮನಾಭನ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications