ಜ್ವರದಂತೆ ವ್ಯಾಪಿಸುತ್ತಿರುವ ಮಾರಕ ‘ಹಕ್ಕಿಜ್ವರ’ : ಥಾಯ್ಲೆಂಡ್ ತತ್ತರ
ಜ್ವರದಂತೆ ವ್ಯಾಪಿಸುತ್ತಿರುವ ಮಾರಕ ‘ಹಕ್ಕಿಜ್ವರ’ : ಥಾಯ್ಲೆಂಡ್ ತತ್ತರ
ಪಾಕಿಸ್ತಾನದಲ್ಲಿ ಸೋಂಕು ತಗುಲಿದ ದಶಲಕ್ಷ ಕೋಳಿಗಳ ಕೊಲೆ
ನೆರೆಯ ಲಾವೋಸ್‌ನಲ್ಲೂ ಈ ಹಕ್ಕಿಜ್ವರಕ್ಕೆ ಬಲಿಯಾದ ಪ್ರಕರಣಗಳು ವರದಿಯಾಗಿವೆ. ಈ ವೈರಸ್ ಕೋಳಿಗಳಿಂದ ಬಂದಿರುವುದಾಗಿ ಪ್ರಯೋಗಾಲಯದ ಪರೀಕ್ಷೆಯ ಫಲಿತಾಂಶ ತಿಳಿಸಿದೆ. ಸಂಪೂರ್ಣ ರೋಗಲಕ್ಷಣದ ಮಾಹಿತಿಗಾಗಿ, ಚೈನಾವು ಹಕ್ಕಿರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿದೆ.
ಹಕ್ಕಿ ಜ್ವರಕ್ಕೆ ಈ ವರೆವಿಗೆ ಬಲಿಯಾದವರಲ್ಲಿ ಥೈಲ್ಯಾಂಡ್‌ನ ಇಬ್ಬರು ಹಾಗೂ ಆರು ಜನ ವಿಯೆಟ್ನಾಂ ಗೆ ಸೇರಿದವರಾಗಿದ್ದಾರೆ.
ಥೈಲ್ಯಾಂಡ್, ಹಕ್ಕಿರೋಗದ ಹರಡುವಿಕೆಯನ್ನು ಇಡೀ ಏಷ್ಯಾದಿಂದ ಮುಕ್ತಗೊಳಿಸಲು ನಾಳೆ(ಬುಧವಾರ) ಅಂತರ ರಾಷ್ಟ್ರೀಯ ಸಭೆಯನ್ನು ಕರೆದಿದೆ. ಚೈನಾ, ಯುರೋಪ್, ಅಮೇರಿಕಾ ಸೇರಿದಂತೆ ಹಲವಾರು ದೇಶಗಳು ಸಮಾಲೋಚನೆಗೆ ಒಪ್ಪಿಗೆಯನ್ನೂ ಸೂಚಿಸಿವೆ.
ವಿಯೆಟ್ನಾಂನಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ. ಹಕ್ಕಿಜ್ವರವು ಥಾಯ್ಲೆಂಡ್, ಜಪಾನ್, ತೈವಾನ್, ದಕ್ಷಿಣ ಕೊರಿಯಾ, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅಲ್ಲದೆ ಪಾಕಿಸ್ತಾನಕ್ಕೂ ಹಬ್ಬಿದ್ದು, ನಲವತ್ತು ಲಕ್ಷ ಕೋಳಿಗಳು ಇದಕ್ಕೆ ಬಲಿಯಾಗಿವೆ ಎಂದು ಕೃಷಿ ಸಂಶೋಧನಾಕಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಕೆಲ ಭಾಗಗಳಲ್ಲಿ ಹಕ್ಕಿಜ್ವರ ತೀವ್ರ ಪ್ರಮಾಣದಲ್ಲಿ ಕಾಣಸಿಕೊಂಡಿದ್ದು , ಹಕ್ಕಿಜ್ವರದ ಸೋಂಕು ತಗುಲಿದೆ ಎಂದು ಶಂಕಿಸಲಾದ ಸುಮಾರು 10 ಲಕ್ಷ ಕೋಳಿಗಳನ್ನು ಕೊಲ್ಲಲಾಗಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications