ಏಡ್ಸ್ ಹಠಾವೊ: ಭಾರತಕ್ಕೆ ಗೇಟ್ಸ್ ಪ್ರತಿಷ್ಠಾನದ 900 ಕೋಟಿ ರು.
ಏಡ್ಸ್ ಹಠಾವೊ: ಭಾರತಕ್ಕೆ ಗೇಟ್ಸ್ ಪ್ರತಿಷ್ಠಾನದ 900 ಕೋಟಿ ರು.
ಕೋಲ್ಕತ್ತಾದ ರೆಡ್‌ಲೈಟ್ ಪ್ರದೇಶಕ್ಕೆ ಭೇಟಿಕೊಟ್ಟ ಶ್ರೀಮತಿ ಬಿಲ್‌ಗೇಟ್ಸ್
ಮೈಕ್ರೋಸಾಫ್ಟ್‌ನ ಮುಖ್ಯಸ್ಥ ಬಿಲ್‌ಗೇಟ್ಸ್ ಅವರು ಸ್ಥಾಪಿಸಿರುವ ಬಿಲ್‌ಗೇಟ್ಸ್ ಪ್ರತಿಷ್ಠಾನ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಏಡ್ಸ್ ವಿರುದ್ಧದ ಸಮರಕ್ಕಾಗಿ 900 ಕೋಟಿ ರುಪಾಯಿ ನೆರವು ಪ್ರಕಟಿಸಿರುವ ವಿಷಯವನ್ನು, ಗೇಟ್ಸ್ ಅವರ ಪತ್ನಿ ಮಿಲಿಂಡಾ ಗೇಟ್ಸ್ ಅವರು ಜ.25ರಂದು ಕೋಲ್ಕತ್ತಾದಲ್ಲಿ ಪ್ರಕಟಿಸಿದರು.
ವಿಶ್ವದ ಅತ್ಯಂತ ದೊಡ್ಡ ರೆಡ್‌ಲೈಟ್ ಏರಿಯಾ ಎಂದು ಪ್ರಸಿದ್ಧವಾದ ಕೋಲ್ಕತ್ತಾದ ಪ್ರದೇಶವೊಂದಕ್ಕೆ ಭೇಟಿ ನೀಡಿ, ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆ ಅಲ್ಲಿ ಅನುಷ್ಠಾನಗೊಂಡಿರುವ ಕುರಿತು ಮಿಲಿಂಡಾ ಗೇಟ್ಸ್ ಮಾಹಿತಿ ಸಂಗ್ರಹಿಸಿದರು. ಏಡ್ಸ್ ರೋಗವನ್ನು ನಿಯಂತ್ರಿಸಬೇಕಾದುದು ನಮ್ಮ ಮುಂದಿನ ಅತ್ಯಂತ ಜರೂರಾದ ವಿಷಯ ಎಂದು ಅವರು ಹೇಳಿದರು.
ಕನಿಷ್ಠ 9 ಸಾವಿರ ಮಂದಿ ಲೈಂಗಿಕ ಕಾರ್ಯಕರ್ತರು ಕೋಲ್ಕತ್ತಾದ ರೆಡ್‌ಲೈಡ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications