ಪ್ರತಿದಿನವೂ ದ್ರಾಕ್ಷಿ ಷರಬತ್ತು ಕುಡಿಯಿರಿ, ಹೃದಯವಂತರಾಗಿರಿ !
ಪ್ರತಿದಿನವೂ ದ್ರಾಕ್ಷಿ ಷರಬತ್ತು ಕುಡಿಯಿರಿ, ಹೃದಯವಂತರಾಗಿರಿ !
ದ್ರಾಕ್ಷಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಡಾ.ದಾಸ್
ಹೃದಯವಂತರು ಎಂದರೆ ಆರೋಗ್ಯವಂತರು ಎಂದರ್ಥ. ದ್ರಾಕ್ಷಿ ಷರಬತ್ತು ಕುಡಿಯುವ ಮೂಲಕ ಡಾಕ್ಟರಿಂದ ದೂರವಿರಿ ಎನ್ನುತ್ತಿದೆ ಈ ಸಮೀಕ್ಷೆ . ಕನೆಕ್ಟಿಕಟ್‌ನ ಭಾರತೀಯ ಮೂಲದ ವೈದ್ಯರೊಬ್ಬರ ನೇತೃತ್ವದಲ್ಲಿ ನಡೆದ ಈ ಸಮೀಕ್ಷೆಯನ್ನು ನಂಬುವುದಾದರೆ- ದ್ರಾಕ್ಷಿಗೂ ಹೃದಯಕ್ಕೂ ಭಳಾರೆ ನಂಟು.
ಕನೆಕ್ಟಿಕಟ್‌ನಲ್ಲಿನ ಕಾರ್ಡಿಯಾವಸ್ಕ್ಯುಲರ್ ಸಂಶೋಧನಾ ಕೇಂದ್ರದ ಡಾ.ದೀಪಕ್ ದಾಸ್ ಹೇಳುವ ಪ್ರಕಾರ- ನಾವು ನಮ್ಮ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು. ರೆಡ್ ವೈನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ ದ್ರಾಕ್ಷಿಗಳನ್ನು ತಿನ್ನುವುದರಿಂದಲೂ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಡಾ.ದೀಪಕ್‌ದಾಸ್ ಹಾಗೂ ಅವರ ತಂಡದಲ್ಲಿನ 26 ಮಂದಿ ವೈದ್ಯರು ಸತತ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿದ ನಂತರ ದ್ರಾಕ್ಷಿ ಹೃದಯಕ್ಕೆ ಒಳ್ಳೆಯದೆನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಪ್ರತಿದಿನವೂ 8ರಿಂದ 10 ದ್ರಾಕ್ಷಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ಡಾ.ದಾಸ್. ಅವರ ಪ್ರಕಾರ ಹಸಿರು ದ್ರಾಕ್ಷಿಗಳಿಗಿಂತ ಕಪ್ಪು ಹಾಗೂ ಕೆಂಪು ದ್ರಾಕ್ಷಿಗಳಲ್ಲೇ ಔಷಧಿಯ ಗುಣಗಳು ಹೆಚ್ಚು .
ಇನ್ನುಮುಂದೆ, ದ್ರಾಕ್ಷಾರಸವನ್ನು ಔಷಧಿಯೆಂದು ತಿಳಿಯಬೇಕೇ ಹೊರತು ಅಮಲು ಪಾನೀಯವೆಂದಲ್ಲ .
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications