ವಿಪ್ರೋ ಲಿ. ಲೆಕ್ಕಪತ್ರ : 3 ತ್ರೆೃಮಾಸಿಕದಲ್ಲಿ 274ಕೋಟಿ ರು. ಲಾಭ
ವಿಪ್ರೋ ಲಿ. ಲೆಕ್ಕಪತ್ರ : 3 ತ್ರೆೃಮಾಸಿಕದಲ್ಲಿ 274ಕೋಟಿ ರು. ಲಾಭ
ವರ್ಷದಿಂದ ವರ್ಷಕ್ಕೆ ದಾಖಲೆ ಲಾಭ ಗಳಿಕೆಯ ಖುಷಿಯಲ್ಲಿ ವಿಪ್ರೋ..
ಕಳೆದ ವಿತ್ತವರ್ಷದ ಮೂರನೇ ತ್ರೆೃಮಾಸಿಕದಲ್ಲಿ ನ ನಿವ್ವಳ ಲಾಭಕ್ಕಿಂಥ ಈ ಬಾರಿ ಪ್ರತಿಶತ 19ರ ಹೆಚ್ಚಳವನ್ನು ವಿಪ್ರೋ ಸಾಧಿಸಿದೆ. ಡಿಸೆಂಬರ್ 31, 2003ಕ್ಕೆ ಕೊನೆಗೊಂಡ ಮೂರನೇ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಜ.21ರ ಬುಧವಾರ ವಿಪ್ರೋ ಲಿಮಿಟೆಡ್ ಬಿಡುಗಡೆ ಮಾಡಿತು.
ಮೂರನೇ ತ್ರೆೃಮಾಸಿಕದಲ್ಲಿ ವಿಪ್ರೋ ಸಂಸ್ಥೆಯ ಆದಾಯ 1521 ಕೋಟಿ ರುಪಾಯಿಗಳಾಗಿದ್ದು , ಆದಾಯದಲ್ಲಿ ಶೇ.37ರ ಏರಿಕೆಯಾಗಿದೆ. ಈ ತ್ರೆೃಮಾಸಿಕದ ಅವಧಿಯಲ್ಲಿ 21 ಹೊಸ ಗ್ರಾಹಕರನ್ನು ವಿಪ್ರೋ ಪಡೆದಿದ್ದು , ಕಂಪನಿಯ ಜಾಗತಿಕ ಐಟಿ ಸೇವೆಗಳು ಮತ್ತು ಉತ್ಪನ್ನಗಳ ಮೇಲಿನ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಲೆಕ್ಕಪತ್ರ ಬಣ್ಣಿಸಿದೆ.
ವಾಣಿಜ್ಯ ಚಟುವಟಿಕೆಗಳು ಉತ್ತಮ ಗತಿಯಲ್ಲಿ ಮುಂದುವರಿಯುತ್ತಿವೆ. 2004ರ ಮಾರ್ಚ್ ತ್ರೆೃಮಾಸಿಕದಲ್ಲಿ ಇನ್ನಷ್ಟು ಸಾಧನೆಯ ಹಂಬಲದಲ್ಲಿದ್ದು , ಜಾಗತಿಕ ಐಟಿ ಸೇವೆಗಳಿಂದ 269 ಮಿಲಿಯನ್ ಡಾಲರ್‌ಗಳ ವ್ಯವಹಾರ ನಿರೀಕ್ಷಿಸಲಾಗುತ್ತಿದೆ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications